ಬಸ್ತಾರ್ (ಛತ್ತೀಸ್ಗಡ):ಬಿಜಾಪುರದಲ್ಲಿ ಶನಿವಾರ ಪರಸ್ಪರ ಗುಂಡು ಹಾರಿಸಿಕೊಂಡು ಗಾಯಗೊಂಡಿದ್ದ ಛತ್ತೀಸ್ಗಡದ ಸಶಸ್ತ್ರ ಪಡೆ(ಸಿಎಎಫ್)ಯ ಮೂವರು ಸಿಬ್ಬಂದಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಐಜಿ ಬಸ್ತರ್ ಪಿ. ಸುಂದರರಾಜ್ ತಿಳಿಸಿದ್ದಾರೆ.
ಬಿಜಾಪುರದಲ್ಲಿ ಪರಸ್ಪರ ಗುಂಡು ಹಾರಿಸಿಕೊಂಡ ಸಿಎಎಫ್ ಸಿಬ್ಬಂದಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ - ಸಿಎಎಫ್ ಸಿಬ್ಬಂದಿ
ಬಿಜಾಪುರದಲ್ಲಿ ಶನಿವಾರ ಪರಸ್ಪರ ಗುಂಡು ಹಾರಿಸಿಕೊಂಡು ಗಾಯಗೊಂಡಿದ್ದ ಛತ್ತೀಸ್ಗಡದ ಸಶಸ್ತ್ರ ಪಡೆ(ಸಿಎಎಫ್) ಯ ಮೂವರು ಸಿಬ್ಬಂದಿಯಲ್ಲಿ ಓರ್ವ ಮೃತಪಟ್ಟಿದ್ದಾರೆ ಎಂದು ಐಜಿ ಬಸ್ತರ್ ಪಿ. ಸುಂದರರಾಜ್ ತಿಳಿಸಿದ್ದಾರೆ.
ಪರಸ್ಪರ ಗುಂಡು ಹಾರಿಸಿಕೊಂಡ ಸಿಎಎಫ್ ಸಿಬ್ಬಂದಿ: ಓರ್ವ ಮೃತ, ಇಬ್ಬರು ಗಂಭೀರ
ಫರೇಶ್ಗಡದಲ್ಲಿ ನಡೆಯುತ್ತಿದ್ದ ಸಶಸ್ತ್ರ ಪಡೆ(CAF) ಯ ಶಿಬಿರಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಸಿಬ್ಬಂದಿ ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ.
ಗಾಯಗೊಂಡ ಇನ್ನಿಬ್ಬರು ಸಿಎಎಫ್ ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುಂದರರಾಜ್ ತಿಳಿಸಿದ್ದಾರೆ.