ಕರ್ನಾಟಕ

karnataka

ETV Bharat / bharat

ಸ್ಥಳೀಯ ಮದ್ಯ ಸೇವಿಸಿ ಓರ್ವ ಸಾವು: 22 ಮಂದಿ ಅಸ್ವಸ್ಥ - ವಿಶಾಖಪಟ್ಟಣಂ ಆಂಧ್ರಪ್ರದೇಶ

ಚಿನಾರಾಬಾ, ಕೋಟಪಾರ್ತಿ ಮತ್ತು ಕಾಕರವಾಲಾಸ ಎಂಬ 3 ಗ್ರಾಮಳ ಬುಡಕಟ್ಟು ಜನಾಂಗದ 22 ಮಂದಿ ಸ್ಥಳೀಯ ಮದ್ಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಓರ್ವ ಮೃತಪಟ್ಟಿದ್ದಾನೆ.

One dead, 22 fall sick after consuming 'local alcohol' in Andhra
ಸ್ಥಳೀಯ ಮದ್ಯ ಸೇವನೆ ಆರೋಪ: 22 ಮಂದಿಗೆ ಅನಾರೋಗ್ಯ, ಓರ್ವ ಮೃತ!

By

Published : Sep 19, 2020, 9:42 AM IST

ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ವಿಜಯನಗರಂ ಜಿಲ್ಲೆಯ 3 ಹಳ್ಳಿಗಳಲ್ಲಿ ಸ್ಥಳೀಯ ಮದ್ಯ ಸೇವಿಸಿ 22 ಮಂದಿ ಅಸ್ವಸ್ಥರಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ.

ಈ ಸಂಬಂಧ 22 ಪ್ರಕರಣಗಳು ವರದಿಯಾಗಿವೆ. ಕಾಲಿನಲ್ಲಿ ಊತ, ಹೊಟ್ಟೆನೋವು, ಕಣ್ಣುಗಳು ಕೆಂಪಾಗಿದ್ದು ಬಿಟ್ಟರೆ ಬೇರೆ ಯಾವ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಇದು ನಮ್ಮ ಗಮನಕ್ಕೆ ಬರುವ ಹೊತ್ತಿಗೆ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ.ವಿನಯ್ ಚಂದ್ ತಿಳಿಸಿದ್ದಾರೆ.

ಚಿನಾರಾಬಾ, ಕೋಟಪಾರ್ತಿ ಮತ್ತು ಕಾಕರವಾಲಾಸ ಎಂಬ 3 ಗ್ರಾಮಗಳ ಬುಡಕಟ್ಟು ಜನಾಂಗದವರು ಸ್ಥಳೀಯ ಮದ್ಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಚಿನಾರಾಬಾದಲ್ಲಿ 248, ಕೋಟಪಾರ್ತಿ 95 ಮತ್ತು ಕಾಕರವಾಲಸಾ 125 ಜನಸಂಖ್ಯೆ ಇದ್ದು, ಅನಾರೋಗ್ಯಕ್ಕೊಳಗಾದವರಲ್ಲಿ ಹೆಚ್ಚಿನವರು 30 ಮತ್ತು 40ರ ಆಸುಪಾಸಿನವರಾಗಿದ್ದಾರೆ.

ಸದ್ಯ ಅನಾರೋಗ್ಯಕ್ಕೆ ಒಳಗಾದ 22 ಮಂದಿಯನ್ನು ಚಿಕಿತ್ಸೆಗಾಗಿ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಗೆ (ಕೆಜಿಹೆಚ್) ಸ್ಥಳಾಂತರಿಸಲಾಗಿದೆ. ಈ ಮೊದಲು ಆರೋಗ್ಯ ಇಲಾಖೆಯು ಬುಡಕಟ್ಟು ಗ್ರಾಮದಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದರೂ ಕೂಡ ಸುಧಾರಿಸಿಲ್ಲ. ಸದ್ಯ ಅವರನ್ನು ಕೆಜಿಹೆಚ್‌ಗೆ ಸ್ಥಳಾಂತರಿಸಲಾಗಿದೆ. ಸದ್ಯ ಎಲ್ಲರ ಸ್ಥಿತಿ ಸ್ಥಿರವಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ. ಜೊತೆಗೆ ಕೋವಿಡ್​​ ಪರೀಕ್ಷೆಗೆ ಒಳಪಡಿಸಲಾಗಿದ್ದು, 22 ಮಂದಿಯ ವರದಿ ನೆಗೆಟಿವ್​​ ಬಂದಿದೆ ಎಂದು ಡಿಸಿ ತಿಳಿಸಿದ್ದಾರೆ.

ABOUT THE AUTHOR

...view details