ಕರ್ನಾಟಕ

karnataka

ETV Bharat / bharat

'ಶಿವ ಸೈನಿಕ' ಕೂಡ ಮುಖ್ಯಮಂತ್ರಿಯಾಗ್ತಾರೆ ಎಂದ ಉದ್ಧವ್​... ಬಿಜೆಪಿ ಪ್ರಕ್ರಿಯಿಸಿದ್ದು ಹೀಗೆ!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದರ ಮಧ್ಯೆ ಮುಖ್ಯಮಂತ್ರಿ ಸ್ಥಾನದ ಮೇಲೆ ಬಿಜೆಪಿ ಜೊತೆ ಶಿವಸೇನೆ ಸಹ ಕಣ್ಣಿಟ್ಟಿದೆ.

ಆದಿತ್ಯ​ ಠಾಕ್ರೆ

By

Published : Oct 7, 2019, 4:24 PM IST

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಖುರ್ಚಿ ಮೇಲೆ ಕಣ್ಣಿಟ್ಟಿರುವ ಶಿವಸೇನೆ ಈ ಸಲ ತನ್ನ ಕುಟುಂಬದಿಂದಲೇ ಆದಿತ್ಯ ಠಾಕ್ರೆಗೆ ಟಿಕೆಟ್​ ನೀಡಿದ್ದು, ಹೇಗಾದ್ರೂ ಮಾಡಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿ ತನ್ನ ನೇತೃತ್ವದಲ್ಲೇ ಸರ್ಕಾರ ರಚನೆ ಮಾಡುವ ಮಾಸ್ಟರ್​ ಪ್ಲಾನ್​ ಹಾಕಿಕೊಂಡಿದೆ.

ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಮೊಮ್ಮಗ, ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಇದೇ ಮೊದಲ ಬಾರಿಗೆ ವರ್ಲಿ ಕ್ಷೇತ್ರದಿಂದ ಕಳೆದ ಗುರುವಾರವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ, ಮಾತನಾಡಿದ್ದ ಅವರು ಮಹಾರಾಷ್ಟ್ರ ಜನರಿಗೆ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿಯಾಗಲಿದ್ದು, ಆ ಸಾಮರ್ಥ್ಯ ತಮ್ಮಲಿದೆ ಎಂದು ಮುಖ್ಯಮಂತ್ರಿ ಆಗುವ ಇಂಗಿತ ಸಹ ಹೊರಹಾಕಿದ್ದಾರೆ. ಇದರ ಮಧ್ಯೆ ಉದ್ಧವ್​ ಠಾಕ್ರೆ ಕೂಡ ಅದಕ್ಕೆ ಸಾಥ್​ ನೀಡಿದ್ದು, ಹೊಸ ಸರ್ಕಾರ ರಚನೆಯಾಗುವ ವೇಳೆ ಶಿವಸೇನೆ ಕೂಡ ಸಮಾನವಾದ ಜವಾಬ್ದಾರಿ ತೆಗೆದುಕೊಳ್ಳಲು ಸಜ್ಜಾಗಿದೆ ಎಂದು ಹೇಳಿಕೆ ನೀಡಿದ್ದರು.

ಉದ್ಧವ್​ ಠಾಕ್ರೆ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​, ಶಿವಸೇನೆ ಮುಖ್ಯಸ್ಥರು ತಮ್ಮ ಆಶಯ ವ್ಯಕ್ತಪಡಿಸಿದ್ದು, ಅದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಹೊಸ ಸರ್ಕಾರ ರಚನೆ ವೇಳೆ ಬಿಜೆಪಿ ಹೈಕಮಾಂಡ್​ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್​ 21ರಂದು 288 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಎಲೆಕ್ಷನ್​​ನಲ್ಲಿ 144 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 126 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧಿಸಿವೆ.

ಪ್ರಕಾಶ್​ ಜಾವ್ಡೇಕರ್​​

ABOUT THE AUTHOR

...view details