ಪಶ್ಚಿಮ ಗೋದಾವರಿ:ಅವಧಿ ಮೀರಿದ ಚಾಕೊಲೇಟ್‌ಗಳನ್ನು ಸೇವಿಸಿ ಮೂರು ವರ್ಷದ ಬಾಲಕನೋರ್ವ ಸಾವನ್ನಪ್ಪಿ, ಆತನ ಇಬ್ಬರು ಸ್ನೇಹಿತರು ಅಸ್ವಸ್ಥರಾಗಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ರಾವಿಗೂಡಂ ಗ್ರಾಮದಲ್ಲಿ ನಡೆದಿದೆ.
ಔಟ್ಡೇಟೆಡ್ ಚಾಕೊಲೇಟ್ ಸೇವಿಸಿ ಬಾಲಕ ಸಾವು, ಇಬ್ಬರು ಅಸ್ವಸ್ಥ - one Child died, two sick after eating outdated chocolate
ಅವಧಿ ಮೀರಿದ ಚಾಕೊಲೇಟ್‌ಗಳನ್ನು ಸೇವಿಸಿ ಮೂರು ವರ್ಷದ ಬಾಲಕನೋರ್ವ ಸಾವನ್ನಪ್ಪಿ, ಆತನ ಇಬ್ಬರು ಸ್ನೇಹಿತರು ಅಸ್ವಸ್ಥರಾಗಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ರಾವಿಗೂಡಂ ಗ್ರಾಮದಲ್ಲಿ ನಡೆದಿದೆ.
ಔಟ್ಡೇಟೆಡ್ ಚಾಕೊಲೇಟ್ ಸೇವಿಸಿ ಬಾಲಕ ಸಾವು, ಇಬ್ಬರು ಅಸ್ವಸ್ಥ
ಅಭಿಚರಣ್ ಮೃತ ಬಾಲಕ. ಈತ ಅವಧಿ ಮೀರಿದ ಚಾಕೊಲೇಟ್‌ಗಳನ್ನು ತಾನು ತಿಂದು, ಹೊರಗೆ ಆಟವಾಡುತ್ತಿದ್ಧ ಸ್ನೇಹಿತರಾದ ಸಂತೋಷ್ ಮತ್ತು ರಾಹುಲ್ಗೂ ನೀಡಿದ್ದನಂತೆ.
ಈದಾದ ಸ್ವಲ್ಪ ಸಮಯದಲ್ಲೇ ಮೂವರು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ನಂತರ ಅಭಿಚರಣ್ ಪ್ರಜ್ಞೆ ತಪ್ಪಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ರೂ ಚಿಕಿತ್ಸೆ ಫಲಸದೇ ಅಭಿಚರಣ್ ಸಾವನ್ನಪ್ಪಿದ್ದಾನೆ.
ಸಂತೋಷ್ ಮತ್ತು ರಾಹುಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.