ಶ್ರೀನಗರ:ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಗ್ಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ರಕ್ಷಣೆ ಹಿತದೃಷ್ಠಿಯಿಂದ ಯಾತ್ರೆಯನ್ನು ದಿಢೀರ್ ರದ್ಧುಗೊಳಿಸಲಾಗಿದೆ. ಇದ್ರ ಜೊತೆಗೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಅಮರನಾಥ ಯಾತ್ರೆ ರದ್ದು ಬೆನ್ನಲ್ಲೇ ಉಗ್ರರ ಅಟ್ಟಹಾಸ: ಗುಂಡಿನ ದಾಳಿಗೆ ಯೋಧ ಹುತಾತ್ಮ - ಮಾಜಿ ಸಿಎಂ ಮೊಹಬೂಬಾ ಮುಫ್ತಿ
ಅಮರನಾಥ ಯಾತ್ರೆ ರದ್ಧು ಬೆನ್ನಲ್ಲೇ ಉಗ್ರರು ಬಾಲ ಬಿಚ್ಚಿದ್ದು, ಭಯೋತ್ಪಾದಕರು-ಭಾರತೀಯ ಯೋಧರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಅಮರನಾಥ್ ಯಾತ್ರೆ ರದ್ದು
ಶೋಫಿಯಾನ್ ಬಳಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. 34 ರಾಷ್ಟ್ರೀಯ ರೈಫಲ್ಸ್ನ ಯೋಧ ಹುತಾತ್ಮರಾಗಿದ್ದಾರೆ.
ಘಟನೆಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಉಗ್ರನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.