ನವದೆಹಲಿ:ವಿಶ್ವ ಪ್ರವಾಸಿ ದಿನವನ್ನು ವಿಶ್ವಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದ್ದರೆ, ಅತ್ತ ಕಾಂಗ್ರೆಸ್ ಇದೇ ವಿಚಾರದಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸದ ವಿಷಯವನ್ನೆತ್ತಿಕೊಂಡು ಟ್ವೀಟ್ ಮಾಡಿ ಅಣಕಿಸಿದೆ.
ವಿಶ್ವ ಪ್ರವಾಸಿ ದಿನದಂದು ಮೋದಿ ಹೆಸರಲ್ಲಿ ಅಣಕಿಸಿದ ಕಾಂಗ್ರೆಸ್...!
ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿ ಈ ಹಿಂದಿನ ಎಲ್ಲ ಪ್ರಧಾನಿಗಳನ್ನು ಮೀರಿಸಿದ್ದಾರೆ. ಮೊದಲ ಅವಧಿಯಲ್ಲಿ ಸಾಕಷ್ಟು ದೇಶಗಳನ್ನು ಸುತ್ತಿದ್ದ ಮೋದಿ ಇದೀಗ ಎರಡನೇ ಅವಧಿಯಲ್ಲಿಯೂ ಅದೇ ರೀತಿಯಲ್ಲಿ ದೇಶ ಸುತ್ತುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ವಿಶ್ವ ಪ್ರವಾಸಿ ದಿನದಂದು ಮೋದಿ ಹೆಸರಲ್ಲಿ ಅಣಕಿಸಿದ ಕಾಂಗ್ರೆಸ್
ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿ ಈ ಹಿಂದಿನ ಎಲ್ಲ ಪ್ರಧಾನಿಗಳನ್ನು ಮೀರಿಸಿದ್ದಾರೆ. ಮೊದಲ ಅವಧಿಯಲ್ಲಿ ಸಾಕಷ್ಟು ದೇಶಗಳನ್ನು ಸುತ್ತಿದ್ದ ಮೋದಿ ಇದೀಗ ಎರಡನೇ ಅವಧಿಯಲ್ಲಿಯೂ ಅದೇ ರೀತಿಯಲ್ಲಿ ದೇಶ ಸುತ್ತುತ್ತಿದ್ದಾರೆ.
ಮೋದಿ ವಿದೇಶ ಪ್ರವಾಸಕ್ಕೆ ತೆರಳುವ ವೇಳೆ ವಿಮಾನ ಮೇಲಿನಿಂದ ಕೈಬೀಸುತ್ತಿರುವ 18 ವಿವಿಧ ಫೋಟೋಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಮೂಲಕ ವಿಶ್ವ ಪ್ರವಾಸಿ ದಿನವನ್ನು ವಿಶೇಷವಾಗಿ ಅಣಕಿಸಿದೆ.