ಹೈದರಾಬಾದ್: ಪ್ರೇಮಿಗಳ ದಿನದ ಆಚರಣೆಗಾಗಿ ಮಾಲ್ಗಳಲ್ಲಿ ಮಾಡಿದ್ದ ಅಲಂಕಾರಗಳನ್ನು ಭಜರಂಗ ದಳದ ಕಾರ್ಯಕರ್ತರು ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಪ್ರೇಮಿಗಳ ದಿನಾಚರಣೆ : ಮಾಲ್ಗಳಿಗೆ ನುಗ್ಗಿದ ಭಜರಂಗದಳದವರು ಮಾಡಿದ್ದೇನು ಗೊತ್ತಾ?... ವಿಡಿಯೋ
ಹೈದರಾಬಾದ್ನ ಮಾಲ್ಗಳಲ್ಲಿ ಪ್ರೇಮಿಗಳನ್ನು ಆಕರ್ಷಿಸಲು ಅಲಂಕಾರ ಮಾಡಲಾಗಿತ್ತು. ಭಜರಂಗ ದಳದ ಕಾರ್ಯಕರ್ತರು ಮಾಲ್ಗಳಿಗೆ ನುಗ್ಗಿ ಧ್ವಂಸಗೊಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ರಾಜ್ಯ ಭಜರಂಗ ದಳ ಮುಖಂಡ ಸುಭಾಷ್ ಚಂದರ್, ನಗರದ ವಿವಿಧ ಸ್ಥಳಗಳಲ್ಲಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದ ಪ್ರೇಮಿಗಳನ್ನು ನೋಡಿದ ನಮ್ಮ ಕಾರ್ಯಕರ್ತರು, ಅವರಿಗೆ ಇದು ಭಾರತದ ಸಂಸ್ಕೃತಿಯಲ್ಲ, ಪ್ರೇಮಿಗಳ ದಿನದ ಬದಲಿಗೆ ಪುಲ್ವಾಮಾ ಹುತಾತ್ಮರ ದಿನವನ್ನ ಆಚರಿಸಿ ಗೌರವ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದರು.
ಇನ್ನು ಭಜರಂಗದಳದ ಕಾರ್ಯಕರ್ತರು ಶುಕ್ರವಾರ ಹೈದರಾಬಾದ್ನಲ್ಲಿ ರ್ಯಾಲಿಗಳನ್ನ ನಡೆಸಿ, ಮಾಲ್, ರೆಸ್ಟೋರೆಂಟ್ಗಳ ಬಳಿ ಪ್ರತಿಭಟನೆ ನಡೆಸಿ, "ಪ್ರೇಮಿಗಳ ದಿನವನ್ನು ಆಚರಿಸುವುದನ್ನು ನಿಲ್ಲಿಸಿ" ಎಂದು ಘೋಷಣೆಯನ್ನ ಕೂಗಿದ್ದಾರೆ.