ನವದೆಹಲಿ: ಶಿಕ್ಷಕ ದಿನಾಚರಣೆಗೆ ಶುಭ ಕೋರಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ತನ್ನ ರಾಜಕೀಯ ವಿರೋಧಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆಗೆ ರಾಹುಲ್ ಟ್ವೀಟ್.. ಟ್ರೋಲಿಗರಿಗೆ ರಾಗಾ ಥ್ಯಾಂಕ್ಸ್ - ಕಾಂಗ್ರೆಸ್ ನಾಯಕ
ಕಳೆದ ಹಲವು ವರ್ಷಗಳಿಂದ ನಾನು ಹಲವರಿಂದ ಕಲಿತಿದ್ದೇನೆ. ಅಂತವರಿಗೆಲ್ಲ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

'ಕಳೆದ ಹಲವು ವರ್ಷಗಳಿಂದ ನಾನು ಹಲವರಿಂದ ಕಲಿತಿದ್ದೇನೆ. ಅಂತವರಿಗೆಲ್ಲ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಅದರಲ್ಲೂ ಸೋಷಿಯಲ್ ಮೀಡಿಯಾ ಟ್ರೋಲ್‌ಗಳ ಸೈನ್ಯ, ಕೆಲವು ಅಜೆಂಡಾಗಳಿಗೆ ಸಿಮಿತವಾಗಿರುವ ಪತ್ರಕರ್ತರು. ನನ್ನ ರಾಜಕೀಯ ವಿರೋಧಿಗಳು, ಸುಳ್ಳು ಪ್ರಚಾರ ಮತ್ತು ಕೋಪ ನನಗೆ ಬಹಳಷ್ಟು ಕಲಿಸಿದೆ. ಇವೆಲ್ಲವೂ ನನ್ನನ್ನು ಹೆಚ್ಚು ಬಲಪಡಿಸಿವೆ' ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಕಂಡಿದ್ದು, ರಾಹುಲ್ ಗಾಂಧಿ ಬಾರೀ ಟ್ರೋಲ್ಗೆ ಗುರಿಯಾಗಿದ್ದರು. ಇದರಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆಯನ್ನೂ ಸಲ್ಲಿಸುವಂತಾಯ್ತು.