ಅಹಮದಾಬಾದ್:ಕೋವಿಡ್-19 ಬಿಕ್ಕಟ್ಟಿನಿಂದ ರಾಜ್ಯ ಹೊರಬರಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗುಜರಾತ್‌ನ 60ನೇ ಸಂಸ್ಥಾಪನಾ ದಿನದಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ ಸಂಸ್ಥಾಪನಾ ದಿನ: ಕೋವಿಡ್-19 ವಿರುದ್ಧ ಹೋರಾಡಲು ಪ್ರತಿಜ್ಞೆ - ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ
ಗುಜರಾತ್‌ನ 60ನೇ ಸಂಸ್ಥಾಪನಾ ದಿನದಂದು ಕೋವಿಡ್-19 ವಿರುದ್ಧ ಹೋರಾಡಲು ಪ್ರತಿಜ್ಞೆ ಕೈಗೊಳ್ಳುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವಂತೆ ಮುಖ್ಯಮಂತ್ರಿ ವಿಜಯ್ ರೂಪಾನಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ವಿಜಯ್ ರೂಪಾನಿ
ಪ್ರತಿ ನಾಗರಿಕರು ಕೊರೊನಾ ವೈರಸ್ ತಡೆಗಟ್ಟಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ನಿಯಮಿತವಾಗಿ ಕೈ ತೊಳೆಯುವುದನ್ನು ಅಭ್ಯಾಸ ಮಾಡುವುದಾಗಿ ರಾಜ್ಯದ ಸಂಸ್ಥಾಪನಾ ದಿನದಂದು ಪ್ರತಿಜ್ಞೆ ಮಾಡುವುಂತೆ ಅವರು ತಿಳಿಸಿದರು.
ಗುಜರಾತ್‌ನ ಸಂಸ್ಥಾಪನಾ ದಿನದಂದು ಕೊರೊನಾ ವೈರಸ್ ಸೋಲಿಸಲು ಮನೆಗಳಲ್ಲಿಯೇ ಪ್ರತಿಜ್ಞೆ ಮಾಡುವ ಮೂಲಕ ಸಂಸ್ಥಾಪನಾ ದಿನವನ್ನು ಆಚರಿಸೋಣ ಎಂದು ರೂಪಾನಿ ಕರೆ ನೀಡಿದ್ದಾರೆ.
Last Updated : May 1, 2020, 12:10 PM IST