ಕರ್ನಾಟಕ

karnataka

ETV Bharat / bharat

ಡೇನಿಯಲ್ ಪರ್ಲ್ ಕೊಲೆ ಪ್ರಕರಣ: ಪಾಕಿಸ್ತಾನ ಕ್ರಮಕ್ಕೆ ಅಮೆರಿಕ ಕೆಂಡಾಮಂಡಲ - ಅಮೆರಿಕಾದ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಅಪಹರಣ

ಇತ್ತೀಚೆಗೆ ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಮರ್ ಸಯೀದ್ ಶೇಖ್, ಫಹಾದ್ ನಸೀಮ್, ಶೇಖ್ ಆದಿಲ್ ಮತ್ತು ಸಲ್ಮಾನ್ ಸಾಕಿಬ್ ಎಂಬುವರನ್ನು ಕರಾಚಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು, ಇದೀಗ ಆರೋಪಿಗಳನ್ನು ಬಿಡುಗಡೆಗೊಳಿಸಿ ಪಾಕಿಸ್ತಾನದ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಆದೇಶ ಅಮೆರಿಕವನ್ನ ಕೆರಳಿಸಿದೆ.

ಓಮರ್ ಶೇಖ್
ಓಮರ್ ಶೇಖ್

By

Published : Jan 29, 2021, 12:25 PM IST

ವಾಷಿಂಗ್ಟನ್: ಅಮೆರಿಕಾದ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಓಮರ್ ಸಯೀದ್ ಶೇಖ್ ಬಿಡುಗಡೆಗೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಆದೇಶಿಸಿದೆ.

ಆರೋಪಿ ಓಮರ್ ಸಯೀದ್ ಶೇಖ್ ಬಿಡುಗಡೆಗೆ ಪಾಕಿಸ್ತಾನದ ಕೆಳಹಂತದ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಪರ್ಲ್ ಸಂಬಂಧಿಕರು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇದಕ್ಕೆ ಅಮೆರಿಕದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಓಮರ್ ಸಯೀದ್ ಶೇಖ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕರಾಚಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಓಮರ್ ಸಯೀದ್ ಶೇಖ್, ಫಹಾದ್ ನಸೀಮ್, ಶೇಖ್ ಆದಿಲ್ ಮತ್ತು ಸಲ್ಮಾನ್ ಸಾಕಿಬ್ ಎಂಬುವರನ್ನು ಜೈಲು ಶಿಕ್ಷೆಯಿಂದ ಖುಲಾಸೆಗೊಳಿಸಿ, ತಕ್ಷಣ ಬಿಡುಗಡೆಗೊಳಿಸುವಂತೆ ಸಿಂಧ್ ಹೈಕೋರ್ಟ್ ಆದೇಶಿಸಿತು. ಇದೀಗ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸಹ ಬಿಡುಗಡೆ ಮಾಡಲು ಆದೇಶಿಸಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಡೇನಿಯಲ್ ಪರ್ಲ್ ಅವರು ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥರಾಗಿದ್ದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಅಲ್ ಖೈದಾ ಸಂಘಟನೆ ನಡುವಿನ ಸಂಬಂಧದ ಕುರಿತು ತನಿಖಾ ವರದಿ ಮಾಡುವುದಕ್ಕಾಗಿ 2002ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಪತ್ರಕರ್ತನನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಪಾಕಿಸ್ತಾನದಲ್ಲಿನ ಈ ಬೆಳವಣಿಗೆ ಅಮೆರಿಕವನ್ನ ಕೆರಳಿಸಿದೆ. ಈ ಬಗ್ಗೆ ಅದು ಪಾಕಿಸ್ತಾನಕ್ಕೆ ಪ್ರಬಲ ಎಚ್ಚರಿಕೆಯನ್ನು ರವಾನಿಸಿದೆ.

ABOUT THE AUTHOR

...view details