ಶ್ರೀನಗರ:ಗೃಹ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಗೃಹ ಬಂಧನದಿಂದ ಮುಕ್ತಿ ಸಿಗುವವರೆಗೆ ಶೇವ್ ಮಾಡೋದಿಲ್ಲ ಎಂದಿದ್ದಾರೆ.
ಗೃಹ ಬಂಧನದಿಂದ ಮುಕ್ತಿ ಸಿಗುವತನಕ ಗಡ್ಡ ಬೋಳಿಸಲ್ವಂತೆ.. ಓಮರ್ ಅಬ್ದುಲ್ಲಾ! - ಜಮ್ಮು ಮತ್ತು ಕಾಶ್ಮೀರ
ಕಳೆದ 29 ದಿನಗಳಿಂದ ಗೃಹ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಗೃಹ ಬಂಧನದಿಂದ ಮುಕ್ತಿ ಸಿಗುವವರೆಗೆ ಶೇವ್ ಮಾಡೋದಿಲ್ಲ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನ ರದ್ಧುಗೊಳಿಸದ ನಂತರ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕ ನಾಯಕರನ್ನ ಗೃಹಬಂಧನದಲ್ಲಿರಿಸಲಾಗಿದೆ.ಇಂದು ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನ ಅವರ ಸಹೋದರಿ ಸಫಿಯಾ ಅಬ್ದುಲ್ಲಾ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಳೆದ 29 ದಿನಗಳಿಂದ ಗೃಹಬಂಧನದಲ್ಲಿರುವ ಓಮರ್ ಅಬ್ದುಲ್ಲಾ ಅಂದಿನಿಂದ ಶೇವ್ ಕೂಡ ಮಾಡಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ, ಗೃಹ ಬಂಧನದಿಂದ ಮುಕ್ತಿ ಸಿಗುವವರೆಗೂ ಶೇವ್ ಮಾಡೋದಿಲ್ಲ ಎಂದಿದ್ದಾರೆ ಅಂತಾ ಸಫಿಯಾ ಅಬ್ದುಲ್ಲಾ ತಿಳಿಸಿದ್ದಾರೆ. ಅಲ್ಲದೆ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ಅವರಿಗೆ ಮಾಹಿತಿಯೇ ಇಲ್ಲ. ಪ್ರತೀ ದಿನ ಮನೆಯಲ್ಲೆ 8 ಕಿಲೋ ಮೀಟರ್ನಷ್ಟು ವಾಕಿಂಗ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.