ನವದೆಹಲಿ:2012ರ ಲಂಡನ್ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಕುಸ್ತಿ ಪಟು ಯೋಗೇಶ್ವರ ದತ್ ಇದೀಗ ಮತ್ತೊಂದು ಹೊಸ ಇನ್ನಿಂಗ್ಸ್ ಆರಂಭಿಸಿದ್ದು, ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದಾರೆ.
ಇವರ ಜತೆ ಮತ್ತೊಬ್ಬ ಹಾಕಿ ಮಾಜಿ ಕ್ರೀಡಾಪಟು ಸಂದೀಪ್ ಸಿಂಗ್ ಸಹ ಕಮಲ ಮುಡಿದಿದ್ದಾರೆ. ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಇಬ್ಬರು ಕ್ರೀಡಾಪಟುಗಳು ಬಿಜೆಪಿ ಸೇರಿದ್ದಾರೆ. ಹರಿಯಾಣದ ಬಿಜೆಪಿ ಮುಖ್ಯಸ್ಥ ಸುಭಾಷ್ ಬರ್ಲಾ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಟೀಂ ಇಂಡಿಯಾದ ಹಾಕಿಯ ಮಾಜಿ ಕ್ಯಾಪ್ಟನ್ ಆಗಿದ್ದ ಸಂದೀಪ್ ಸಿಂಗ್, ಹಾಗೂ ಕುಸ್ತಿಪಟು ಯೋಗೇಶ್ವರ್ ದತ್ ಬಿಜೆಪಿ ಸೇರಿಕೊಂಡಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ.