ಕರ್ನಾಟಕ

karnataka

ETV Bharat / bharat

ಮೋದಿಗೆ ನೇಪಾಳ ಪಿಎಂ ಓಲಿ ಸೌಜನ್ಯ ಕರೆ: ಕೊರೊನಾ ಪರಿಸ್ಥಿತಿ ಕುರಿತು ಚರ್ಚೆ - ಪ್ರಧಾನಿ ನರೇಂದ್ರ ಮೋದಿ

ಹಿಮಾಲಯ ಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು ಮತ್ತು ಬಲಪಡಿಸಲು ಭಾರತ-ನೇಪಾಳ ದ್ವಿಪಕ್ಷೀಯ ಬಾಂಧವ್ಯದಡಿ ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ಭಾರತ, ಕಠ್ಮಂಡುವಿಗೆ ಸಹಾಯ ಮಾಡುತ್ತಿದೆ.

ಫ್ರಧಾನಿ ಮೋದಿಗೆ ಓಲಿ ಸೌಜನ್ಯ ಕರೆ
ಫ್ರಧಾನಿ ಮೋದಿಗೆ ಓಲಿ ಸೌಜನ್ಯ ಕರೆ

By

Published : Aug 15, 2020, 7:00 PM IST

ಕಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಕೊರೊನಾ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಓಲಿ, 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ಭಾರತದ ಜನರಿಗೆ ಶುಭಾಶಯ ಕೋರಿದ್ದಾರೆ. ಭಾರತದ ಜನರ ಹೆಚ್ಚಿನ ಪ್ರಗತಿ ಮತ್ತು ಸಮೃದ್ಧಿಗೆ ಟ್ವೀಟ್ ಮೂಲಕ ಹಾರೈಸಿದ್ದಾರೆ.

ನೇಪಾಳ ಸರ್ಕಾರವು ಭಾರತದ ಭೂಪ್ರದೇಶದ ಕೆಲವು ಭಾಗಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ ನಂತರ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಬಿಗಡಾಯಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಗಳ ನಡುವಿನ ಈ ಕರೆ ಮಹತ್ವದ್ದಾಗಿದೆ.

ಹಿಮಾಲಯ ಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು ಮತ್ತು ಬಲಪಡಿಸಲು ಭಾರತ-ನೇಪಾಳ ದ್ವಿಪಕ್ಷೀಯ ಉಪಕ್ರಮದಡಿ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಭಾರತ ಕಠ್ಮಂಡುವಿಗೆ ಸಹಾಯ ಮಾಡುತ್ತಿದೆ.

ಈ ಉಪಕ್ರಮದ ಅಡಿಯಲ್ಲಿರುವ ಯೋಜನೆಗಳು ಶಿಕ್ಷಣ, ಆರೋಗ್ಯ, ಸಂಪರ್ಕ, ಕುಡಿಯುವ ನೀರು ಮತ್ತು ನೈರ್ಮಲ್ಯ, ವೃತ್ತಿಪರ ತರಬೇತಿ ಮತ್ತು ವೈದ್ಯಕೀಯ ಕ್ಯಾಂಪಸ್ ಕ್ಷೇತ್ರಗಳಿಗೆ ಪ್ರಯೋಜನವನ್ನು ನೀಡುತ್ತವೆ. 2003 ರಿಂದ ಈಚೆಗೆ, ಭಾರತವು 422 ಹೈ ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು (ಎಚ್‌ಐಸಿಡಿಪಿ) ಪೂರ್ಣಗೊಳಿಸಿದೆ. ಇದು ನೇಪಾಳದ 77 ಜಿಲ್ಲೆಗಳನ್ನು ಒಳಗೊಂಡಂತೆ 798.7 ಕೋಟಿ ರೂ.ಗಳ ಆರ್ಥಿಕ ಅನುದಾನವನ್ನು ಹೊಂದಿದೆ ಎಂದು ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಭಾರತದ ಭೂಪ್ರದೇಶಗಳಾದ ಕಲಾಪಣಿ, ಲಿಪುಲೆಖ್ ಮತ್ತು ಲಿಂಪಿಯಾಡುರಾಗಳನ್ನು ಒಳಗೊಂಡ ನೇಪಾಳ ಸರ್ಕಾರ ಮೇ ತಿಂಗಳಲ್ಲಿ ದೇಶದ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತ್ತು.

ABOUT THE AUTHOR

...view details