ಸಿಂಗಪೂರ: ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಶೇ 6 ರಷ್ಟು ಕಡಿತವಾಗಿದೆ. ಮಾರುಕಟ್ಟೆಯಲ್ಲಿ ಭಾರಿ ನಷ್ಟ ಉಂಟಾಗಿದ್ದು, ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವೆ ದರ ಸಮರ ಮುಂದುವರೆದಿದೆ.
ಇಂದು ಕಚ್ಚಾತೈಲ ಬೆಲೆ ಬ್ಯಾರಲ್ ವೊಂದಕ್ಕೆ 33 ಡಾಲರ್ಗೆ ಕುಸಿದಿದೆ. ನಿನ್ನೆ 36 ಡಾಲರ್ ಇದ್ದ ಬೆಲೆ 33ಕ್ಕೆ ಇಳಿಕೆ ಕಂಡಿದೆ. 1991 ರ ಗಲ್ಫ್ ವಾರ್ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಒಪೆಕ್ ಗ್ರೂಪ್ ಕರೆದ ಸಭೆಯಲ್ಲಿ ಭಾಗವಹಿಸಲು ರಷ್ಯಾ ನಿರಾಕರಿಸಿದೆ.