ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚಿಸಲು ಒಐಸಿಯ ಸಭೆ ಕರೆಯುವ ಪಾಕಿಸ್ತಾನದ ಸಲಹೆಯನ್ನು ಸೌದಿ ಅರೇಬಿಯಾ - ಇಸ್ಲಾಮಿಕ್ ದೇಶಗಳ ಸಂಘಟನೆಯ (ಒಐಸಿ) ಪ್ರಸ್ತುತ ಪ್ರಧಾನ ಕಾರ್ಯದರ್ಶಿಯವರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. 2020ರ ಏಪ್ರಿಲ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯುವ ಒಐಸಿ ಸಭೆಯ ಸಾಧ್ಯತೆಯನ್ನು ಭಾರತೀಯ ಮಾಧ್ಯಮಗಳ ಒಂದು ವಿಭಾಗದಲ್ಲಿ ಉಲ್ಲೇಖಿಸಲಾಗಿದ್ದರೂ ಸ್ಥಳ, ದಿನಾಂಕಗಳು ಅಥವಾ ಭಾಗವಹಿಸುವಿಕೆಯ ಮಟ್ಟದಲ್ಲಿ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. 2019ರ ಡಿಸೆಂಬರ್ 26 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಸೌದಿ ಅರೇಬಿಯಾದ ವಿದೇಶಾಂಗ ಸಚಿವರು ತಮ್ಮ ಪಾಕಿಸ್ತಾನದ ರಾಯಬಾರಿಗೆ ಸೌದಿ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿಕೆಯ ಪ್ರಕಾರ, ಇಬ್ಬರು ವಿದೇಶಾಂಗ ಸಚಿವರು "ಕಾಶ್ಮೀರದ ಸ್ಥಿತಿಗತಿಗಳ ಪ್ರಗತಿಯಲ್ಲಿ ಒಐಸಿ ಪಾತ್ರ" ಕುರಿತು ಚರ್ಚಿಸಿದ್ದಾರೆ. "ಭಾರತ ಸರ್ಕಾರದ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರ ರದ್ದುಗೊಳಿಸುವ ಏಕಪಕ್ಷೀಯ ಮತ್ತು ಕಾನೂನುಬಾಹಿರ ನಿರ್ಧಾರ(370 ನೇ ವಿಧಿಯನ್ನು ರದ್ದುಪಡಿಸುವ ವಿಧೇಯಕ) ತೆಗೆದುಕೊಂಡ ನಂತರ ಅಲ್ಲಿನ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ವಿವರವಾಗಿ ಚರ್ಚಿಸಿದ್ದಾರೆ” ಎಂದು ಪಾಕ್ ವಿದೇಶಾಂಗ ಸಚಿವರು ಸಭೆಯ ಬಳಿಕ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಕ್ರಮವನ್ನು ಉಲ್ಲೇಖಿಸಿರುವ ಪಾಕ್ ಸಚಿವರು, “ ಭಾರತದಲ್ಲಿ ಮುಸ್ಲಿಮರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗುತ್ತಿದೆ ”ಎಂದು ಆರೋಪಿಸಿದ್ದಾರೆ.
ಕಾಶ್ಮೀರದೊಂದಿಗೆ ಪಾಕಿಸ್ತಾನದ ಅಸಮಾಧಾನವೀಗ ಬಹಿರಂಗ ರಹಸ್ಯವಾಗಿದೆ. ಆದಾಗ್ಯೂ, ಸೌದಿ ಅರೇಬಿಯಾದ ನಿರ್ಧಾರವು ಒಂದು ನಿರ್ದಿಷ್ಟ ಹಿನ್ನೆಲೆಯ ವಿರುದ್ಧದ ನಿಲುವಿಗೆ ಸೇರುತ್ತದೆ. ಇದು ಇತ್ತೀಚಿನ ಬೆಳವಣಿಗೆಗಳಿಂದ ಪ್ರತಿಫಲಿಸುತ್ತದೆ ಮತ್ತುಆ ಕುರಿತು ವಿವರವಾಗಿ ಕೆಳಗೆ ಚರ್ಚಿಸಲಾಗಿದೆ. ಭಾರತವು ತನ್ನ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಲು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ಆಗಸ್ಟ್ 2019ರಲ್ಲಿ ತೆಗೆದುಕೊಂಡ ನಿರ್ಧಾರವು ಪಾಕಿಸ್ತಾನಕ್ಕೆ ಭಾರತದ ವಿರುದ್ಧ ತನ್ನ ನಿಲುವು ಬಿಂಬಿಸಲು ದೇವರು ಸೃಷ್ಟಿಸಿಕೊಟ್ಟ ಅವಕಾಶದಂತಾಯಿತು. ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಲು ಲಭ್ಯವಿರುವ ಯಾವುದೇ ಅವಕಾಶವನ್ನು ಪಾಕಿಸ್ತಾನವು ಕಳೆದುಕೊಳ್ಳುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಜೊತೆಗೆ, ಕಾಲಕಾಲಕ್ಕೆ "ಕಾಶ್ಮೀರಿಗಳಿಗೆ ಅವರ ಸ್ವಾತಂತ್ರ್ಯ ಹೋರಾಟದಲ್ಲಿ ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು" ಪುನರುಚ್ಚರಿಸುತ್ತಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ವಿಷಯವಾಗಿ ಭಾರತ ವಿರೋಧಿ ಅಭಿಪ್ರಾಯವನ್ನು ಮೂಡಿಸುವ ಹೆಚ್ಚಿನ ಭರವಸೆಯೊಂದಿಗೆ ನಂತರದ ದಿನಗಳಲ್ಲಿ, ಅಂದರೆ ಸೆಪ್ಟೆಂಬರ್ ತಿಂಗಳಳಿನಲ್ಲಿ ಯುಎನ್‌ಜಿಎಗೆ ಭೇಟಿಯಿತ್ತರು. ಕಾಶ್ಮೀರದ ವಿಷಯದಲ್ಲಿ ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ತರುವ ಪ್ರಯತ್ನಗಳನ್ನು ಮಾಡಿದರು. ಆದರೆ ಅಂತಾರಾಷ್ಟ್ರೀಯ ಸಮುದಾಯದಿಂದ ಈ ವಿಷಯದಲ್ಲಿ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ. ತಮ್ಮ ಪ್ರವೇಶದಿಂದಲೇ (ನ್ಯೂಯಾರ್ಕ್ನ ವರದಿಗಾರರಿಗೆ) ಮುಖಭಂಗ ಅನುಭವಿಸಿದ ಅವರು, ಈ ವಿಷಯದಲ್ಲಿ ನಿರಾಶೆಗೊಂಡು ನಿರ್ಗಮಿಸಿದರು.
ಕಾಶ್ಮೀರದ ಬಗೆಗಿನ ಪಾಕಿಸ್ತಾನದ ದೃಷ್ಟಿಕೋನವನ್ನು ಅನುಮೋದಿಸಿದ ಎರಡು ಗಮನಾರ್ಹ ಇಸ್ಲಾಮಿಕ್ ರಾಷ್ಟ್ರಗಳೆಂದರೆ ಮಲೇಷ್ಯಾ ಮತ್ತು ಟರ್ಕಿ ಮಾತ್ರ. ಭಾರತದಲ್ಲಿ "ಒಂದು ಶತಕೋಟಿ ಮಾರುಕಟ್ಟೆ" ಗೆ ಪ್ರತಿಕ್ರಿಯೆಯ ಕೊರತೆಯಿದೆ ಎಂದು ಪ್ರಧಾನಿ ಖಾನ್ ಆರೋಪಿಸಿದರು, ಈ ಫಲಿತಾಂಶವು ಸೌದಿ ಅರೇಬಿಯಾ ಮತ್ತು ಯುಎಇಯಂತಹ ದೈತ್ಯರು ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಮೈತ್ರಿ ಮತ್ತು ಭಾರತದ ಚತುರ ರಾಜತಾಂತ್ರಿಕತೆಯ ಪರಿಣಾಮವಾಗಿದೆ ಎಂಬ ಅಂಶವನ್ನು ಖಾನ್ ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸಿದರು.