ಕೊರಾಪುಟ್ (ಒಡಿಶಾ): ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ಒಡಿಶಾದ ಕೊರಾಪುಟ್ ಎಂಬಲ್ಲಿ ಬುಡಕಟ್ಟು ಜನಾಂಗದ ಜನರು ತಮ್ಮಲ್ಲಿಯೇ ವಿಶಿಷ್ಟ ರೀತಿಯಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಈ ಕಾರ್ಯಕ್ರಗಳಲ್ಲಿ ಸಣ್ಣ ಸಣ್ಣ ಮಕ್ಕಳೇ ವೈರಸ್ ಬಗ್ಗೆ ಮಾಹಿತಿ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಿಗೆ ತಿಳಿಸಿಕೊಡುತ್ತಿದ್ದಾರೆ.
ಮೂಲಗಳ ಪ್ರಕಾರ, ಸ್ಥಳೀಯ ಸಂಗೀತಕಾರ ಹರಿಶ್ಚಂದ್ರ ಮಾಲಿ ನಿರ್ದೇಶಿಸಿ ಈ ಕಾರ್ಯಕ್ರಮಗಳನ್ನು ತಯಾರಿಸುತ್ತಿದ್ದಾರೆ. ಇವರು ಬುಡಕಟ್ಟು ಮಕ್ಕಳಿಗೆ ಸರಳ ಮತ್ತು ಅರ್ಥಪೂರ್ಣವಾದ ರೇಡಿಯೋ ನಾಟಕಗಳನ್ನು ಬುಡಕಟ್ಟು ಜನರ ಉಪಭಾಷೆ ದೇಸಿಯಾ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಇದರಿಂದಾಗಿ ಬುಡಕಟ್ಟು ಮಾರಣಾಂತಿಕ ಖಾಯಿಲೆಯ ಬಗೆಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗುತ್ತಿದೆ. ಶೋಭಾ ಸ್ವಯಂಸೇವಾ ಸಂಸ್ಥೆ ಈ ರೇಡಿಯೋ ಸ್ಟೇಷನ್ ನಡೆಸುತ್ತಿದ್ದು ಪ್ರಸಾರವಾಗುತ್ತಿರುವ ಮಕ್ಕಳ ಕಾರ್ಯಕ್ರಮಗಳು ಕೊರಾಪುಟ್ ಪ್ರದೇಶದಲ್ಲಿ ಜನರ ಗಮನ ಸಳೆಯುವಲ್ಲಿ ಯಶಸ್ವಿಯಾಗಿವೆ.
ಈ ರೇಡಿಯೋ ಕಾರ್ಯಕ್ರಮಗಳು ಕೊರಾಪುಟ್ ಪ್ರದೇಶದ್ಲಲಿ ಸಾಕಷ್ಟು ಜನ ಮೆಚ್ಚುಗೆ ಗಳಿಸಿವೆ. ಯಾಕೆಂದರೆ ಈ ಕಾರ್ಯಕ್ರಮಗಳನ್ನು ನಾವು ಸ್ಥಳೀಯ ಭಾಷೆಯಲ್ಲಿಯೇ ಪ್ರಸ್ತುಪಡಿಸುತ್ತಿದ್ದೇವೆ. ಈ ಜಾಗೃತಿ ನಾಟಕಗಳಲ್ಲಿ ನಾವು ಸಾಕಷ್ಟು ಸಂತಸದಿಂದ ಪಾಲ್ಗೊಳ್ಳುತ್ತಿದ್ದೇವೆ ಅಂತಾರೆ ಬುಡಕಟ್ಟು ಹುಡುಗಿ ಪಿಂಕಿ.