ಕಲಹಂಡಿ( ಒಡಿಶಾ):ಹಣದ ವಿಚಾರಕ್ಕಾಗಿ ಮಹಿಳೆಯೋರ್ವಳು ಬಾಯ್ಫ್ರೆಂಡ್ನ ಕೊಲೆ ಮಾಡಿರುವ ಘಟನೆ ಒಡಿಶಾದ ಕಲಹಂಡಿಯಲ್ಲಿ ನಡೆದಿದ್ದು, ಆಕೆಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣದ ವಿಚಾರಕ್ಕೆ ಜಗಳ: ಬಾಯ್ಫ್ರೆಂಡ್ನ ಕೊಲೆಗೈದ ಮಹಿಳೆ - ಒಡಿಶಾದ ಕಲಹಂಡಿ ನ್ಯೂಸ್
ಹಣದ ವಿಚಾರವಾಗಿ ಮಹಿಳೆಯೋರ್ವಳು ಬಾಯ್ಫ್ರೆಂಡ್ನನ್ನು ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

Odisha woman arrested for killing boyfriend
32 ವರ್ಷದ ಮಹಿಳೆ ತನ್ನ 29 ವರ್ಷದ ಬಾಯ್ಫ್ರೆಂಡ್ ಜೊತೆ ಹಣದ ವಿಚಾರವಾಗಿ ಮಾಡಿದ ಜಗಳ ತಾರಕಕ್ಕೇರಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಸೂಪರಿಡೆಂಟ್ ಡಾ. ಶ್ರವಣ ವಿವೇಕ್ ತಿಳಿಸಿದ್ದು, ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದಿದ್ದಾರೆ. ಆರಂಭದಲ್ಲಿ ಕೊಲೆ ಮಾಡಿರುವ ಸಂಗತಿ ಒಪ್ಪಿಕೊಳ್ಳಲು ಮಹಿಳೆ ನಿರಾಕರಿಸಿದ್ದಳು ಎಂಬ ಮಾಹಿತಿಯನ್ನು ಅವರು ತಿಳಿಸಿದ್ದಾರೆ.