ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ಶಿಕ್ಷಕಿಯ ಪರಿಸರ ಪ್ರೇಮ: ಹಸಿರ ಸಿರಿ ಬೆಳೆದ 'ಗೀತಾಂಜಲಿ'

ಒಡಿಶಾದ ಗೀತಾಂಜಲಿ ಸಮಲ್ ಎಂಬುವರು ಸುಮಾರು ಎಂಟು ಲಕ್ಷ ರೂ. ಖರ್ಚು ಮಾಡಿ ಸಸಿಗಳನ್ನು ನೆಟ್ಟಿದ್ದಾರೆ. ಈಕೆಯ ಪರಿಸರ ಪ್ರೇಮಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹಸಿರ ಸಿರಿ ಬೆಳೆದ 'ಗೀತಾಂಜಲಿ'
ಹಸಿರ ಸಿರಿ ಬೆಳೆದ 'ಗೀತಾಂಜಲಿ'

By

Published : Sep 10, 2020, 12:31 PM IST

ಅಂಗುಲ್(ಒಡಿಶಾ): ವೃತ್ತಿಯಲ್ಲಿ ಶಿಕ್ಷಕಿ, ಆದರೆ ಪ್ರವೃತ್ತಿ ಪರಿಸರವಾದಿ. ಒಡಿಶಾದ ಗೀತಾಂಜಲಿ ಸಮಲ್ ಎಂಬುವರು ಏಕಾಂಗಿಯಾಗಿಯೇ ಪರಿಸರ ಕ್ರಾಂತಿ ಮಾಡುತ್ತಿದ್ದಾರೆ.

ಗೀತಾಂಜಲಿಯವರು ಕಳೆದ ಎಂಟು ವರ್ಷಗಳಿಂದ ಕೇಂದ್ರಪರಾ ಮತ್ತು ಅಂಗುಲ್ ಜಿಲ್ಲೆಗಳಲ್ಲಿ ಸಾವಿರಾರು ಮರಗಳನ್ನು ನೆಟ್ಟಿದ್ದಾರೆ. ಈ ಕಾರ್ಯವನ್ನು ಭವಿಷ್ಯದಲ್ಲಿ ಮುಂದುವರೆಸಲು ತೀರ್ಮಾನಿಸಿದ್ದಾರೆ. 2012ರಲ್ಲಿ ಈ ಕಾರ್ಯಕ್ಕೆ ಮುಂದಾದ ಇವರು ಯಾರಿಂದಲೂ ಒಂದು ರೂಪಾಯಿಯನ್ನೂ ಸಹ ದೇಣಿಗೆ ಪಡೆಯದೆ ಸ್ವಂತ ಪರಿಶ್ರಮದಿಂದ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.

ತನ್ನ ಸ್ಕೂಟಿಯ ಮೂಲಕ ಸಸಿಗಳನ್ನು ಸಾಗಿಸಿದ್ದಾರೆ. ಇನ್ನು ಗಿಡಗಳನ್ನು ನೆಡಲು ಗುಂಡಿ ತೋಡಬೇಕಾಗುತ್ತದೆ. ಆದ್ದರಿಂದ ಕೆಲ ಕಾರ್ಮಿಕರ ಸಹಾಯ ಪಡೆದ ಇವರು, ಅವರಿಗೆ ಹಣ ಪಾವತಿಸಿದ್ದಾರಂತೆ. ಇನ್ನು ಅನವಶ್ಯಕವಾಗಿ ಇರುವ ತೆರೆದ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಪರಿಸರ ಸಂರಕ್ಷಣಾವಾದಿಯಾಗಿರುವ ಇವರು, ಸಸ್ಯಗಳಿಗೆ ಸುತ್ತಲೂ ಮೇಕ್-ಶಿಫ್ಟ್ ಬೇಲಿಯನ್ನು ಹಾಕುವ ಮೂಲಕ ರಕ್ಷಣೆ ಮಾಡಿದ್ದಾರೆ. ಇನ್ನು ಗೀತಾಂಜಲಿಯವರು ಶಾಲೆಗಳಿಗೂ ಹಲವಾರು ಸಸಿಗಳನ್ನು ನೀಡಿದ್ದಾರೆ. ಇದೀಗ ಅವರು ನೆಟ್ಟು ಬೆಳೆಸಿದ ಗಿಡಗಳು ಹೂ ಬಿಡಲು ಪ್ರಾರಂಭಿಸಿವೆ.

ಅಂಗುಲ್ ಜಿಲ್ಲೆಯ ಬನಾರ್ಪಾಲ್ ಬ್ಲಾಕ್ ಅಡಿಯಲ್ಲಿರುವ ಬುದ್ಧಪಂಕಾ ಗ್ರಾಮದಲ್ಲಿ ಗೀತಾಂಜಲಿ ಜನಿಸಿದ್ದಾರೆ. ಬಟಾನಿಕಲ್ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಕೇಂದ್ರಪರಾದ ಮಧುಸಾಗರ್ ವಿದ್ಯಾಪೀಠದಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲೂ ಅವರು ಸಸಿಗಳನ್ನು ನೆಟ್ಟಿದ್ದಾರೆ.

ಕಳೆದ ಆರು ತಿಂಗಳಲ್ಲಿ ಅಂಗುಲ್‌ನ ವಿವಿಧ ಸ್ಥಳಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಇದುವರೆಗೆ ತಮ್ಮ ಸ್ವಂತ ಆದಾಯದಿಂದ 8 ಲಕ್ಷ ರೂಪಾಯಿಗಳನ್ನು ತೋಟಕ್ಕಾಗಿಯೇ ಖರ್ಚು ಮಾಡಿದ್ದಾರೆ. ಗೀತಾಂಜಲಿ ಕಾರ್ಯವನ್ನು ಗುರುತಿಸಿದ ಅನೇಕ ಪರಿಸರವಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details