ಭದ್ರಾಕ್(ಒಡಿಶಾ):ಇಂದು ಸಂಜೆ ವೇಳೆಗೆ ಪಶ್ಚಿಮ ಬಂಗಾಕ್ಕೆ ಅಪ್ಪಳಿಸಲಿರುವ ಅಂಫಾನ್ ಚಂಡಮಾರುತ ಮೊದಲ ಬಲಿ ಪಡೆದಿದೆ. ಒಡಿಶಾದಲ್ಲಿ 3 ತಿಂಗಳ ಗಂಡು ಮಗುವೊಂದು ಅಂಫಾನ್ ಅಬ್ಬರದಿಂದ ಮನೆ ಗೋಡೆ ಕುಸಿದ ಪರಿಣಾಮ ಕೊನೆಯುಸಿರೆಳೆದಿದೆ.
ಅಯ್ಯೋ ದುರ್ವಿಧಿಯೇ... 3 ತಿಂಗಳ ಮಗುವನ್ನೇ ಬಲಿ ಪಡೆಯಿತು ರಕ್ಕಸ ಅಂಫಾನ್ ಚಂಡಮಾರುತ! - ಒಡಿಶಾದಲ್ಲಿ ಚಂಡಮಾರುತಕ್ಕೆ ಮಗು ಸಾವು
ರಕ್ಕಸ ಅಂಫಾನ್ ಚಂಡಮಾರುತ ಒಡಿಶಾದಲ್ಲಿ ಮೂರು ತಿಂಗಳ ಮಗುವನ್ನೇ ಬಲಿ ಪಡೆದಿದೆ. ಹೆಮ್ಮಾರಿ ಚಂಡಮಾರುತಕ್ಕೆ ಒಡಿಶಾದಲ್ಲಿ ಈಗಾಗಲೇ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನೆ ಗೋಡೆ ಕುಸಿದು ಮಗು ಸಾವು
ಅಂಫಾನ್ ಚಂಡಮಾರುತದ ಕಾರಣ ಒಡಿಶಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಮನೆಯ ಗೋಡೆ ಕುಸಿದು ಮೂರು ತಿಂಗಳ ಮಗು ಸಾವನ್ನಪ್ಪಿದೆ. ಜಿಲ್ಲೆಯ ತಿಹಿಡಿ ಬ್ಲಾಕ್‌ನ ಕಂಪಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಮಗು ಮಲಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಗುವಿನ ತಾಯಿ ಗಾಯಗೊಂಡಿದ್ದಾಳೆ.
ಒಡಿಶಾದಲ್ಲಿ ಭೀಕರ ಚಂಡಮಾರುತದಿಂದಾಗಿ ಈಗಾಗಲೇ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.