ಕರ್ನಾಟಕ

karnataka

ETV Bharat / bharat

ಹೊಲದಲ್ಲಿ ಕೂಲಿ ಮಾಡಿ ತಂದೆಯನ್ನು ಪೋಷಿಸುತ್ತಿರುವ ರಾಷ್ಟ್ರೀಯ ಫುಟ್ಬಾಲ್​ ಆಟಗಾರ್ತಿ - ಪುಟ್ಬಾಲ್​ ಆಟಗಾರ್ತಿ ಲಕ್ಷ್ಮಿ ಮುಂಡಾ,

ಆಕೆಗೀಗ 20 ವರ್ಷ. ಚಿಕ್ಕ ವಯಸ್ಸಿಗೆ ರಾಷ್ಟ್ರೀಯ ಫುಟ್ಬಾಲ್​ ಕ್ರೀಡೆಯಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಸಾಧಕಿ. ಆದ್ರೆ ಈಗ ಎರಡು ಹೊತ್ತು ಊಟಕ್ಕಾಗಿ ಮತ್ತು ತನ್ನ ತಂದೆಯನ್ನು ಪೋಷಿಸಲು ಹೊಲದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಳೆ.

National level woman footballer toils hard, National level woman footballer toils hard in paddy fields, footballer Lakshmi Munda, footballer Lakshmi Munda news, footballer Lakshmi Munda latest news, ಹೊಲದಲ್ಲಿ ಕಷ್ಟಪಡುತ್ತಿರುವ ರಾಷ್ಟ್ರ ಮಟ್ಟದ ಫುಟ್ಬಾಲ್​ ಆಟಗಾರ್ತಿ, ಭತ್ತದ ಹೊಲದಲ್ಲಿ ಕಷ್ಟಪಡುತ್ತಿರುವ ರಾಷ್ಟ್ರ ಮಟ್ಟದ ಫುಟ್ಬಾಲ್​ ಆಟಗಾರ್ತಿ, ಪುಟ್ಬಾಲ್​ ಆಟಗಾರ್ತಿ ಲಕ್ಷ್ಮಿ ಮುಂಡಾ, ಪುಟ್ಬಾಲ್​ ಆಟಗಾರ್ತಿ ಲಕ್ಷ್ಮಿ ಮುಂಡಾ ಸುದ್ದಿ,
ಹೊಲದಲ್ಲಿ ಕೂಲಿ ಕೆಲಸ ಮಾಡಿ ತಂದೆಯನ್ನು ಪೋಷಿಸುತ್ತಿರುವ ರಾಷ್ಟ್ರೀಯ ಯುವ ಪುಟ್ಬಾಲ್​ ಆಟಗಾರ್ತಿ

By

Published : Oct 8, 2020, 10:25 AM IST

ಜಜ್ಪುರ್ (ಒಡಿಶಾ):ಕ್ರೀಡೆಗಳನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಒಡಿಶಾ ಸರ್ಕಾರ ಹೇಳುತ್ತಿದೆ. ಆದ್ರೆ ಅಲ್ಲಿನ ರಾಷ್ಟ್ರಮಟ್ಟದ ಫುಟ್ಬಾಲ್ ಆಟಗಾರ್ತಿಯೊಬ್ಬರು ಈಗ ಭತ್ತದ ಗದ್ದೆಯಲ್ಲಿ ಕೆಲಸ ಮಾಡುವ ಮೂಲಕ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.

ರಾಷ್ಟ್ರಮಟ್ಟದ ಮಹಿಳಾ ಫುಟ್‌ಬಾಲ್ ತಂಡದಲ್ಲಿ ತನ್ನ ಹೆಸರು ಗಳಿಸಿರುವ ಜಿಲ್ಲೆಯ ಮಂಗಲ್ಪುರ ಗ್ರಾಮದ 20 ವರ್ಷದ ಬುಡಕಟ್ಟು ಹುಡುಗಿ ಲಕ್ಷ್ಮಿ ಮುಂಡಾ ಈಗ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಜೀವನ ನಡೆಸುವುದಕ್ಕೆ ಪರದಾಡುತ್ತಿದ್ದಾರೆ.

ಹೊಲದಲ್ಲಿ ಕೂಲಿ ಕೆಲಸ ಮಾಡಿ ತಂದೆಯನ್ನು ಪೋಷಿಸುತ್ತಿರುವ ರಾಷ್ಟ್ರೀಯ ಯುವ ಪುಟ್ಬಾಲ್​ ಆಟಗಾರ್ತಿ

ಕೊರೊನಾ ದಾಳಿಗೂ ಮುನ್ನ ಮುಂಡಾ ಭುವನೇಶ್ವರದಲ್ಲಿರುವ ನೀತಾ ಅಂಬಾನಿ ಫುಟ್ಬಾಲ್ ಅಕಾಡೆಮಿಯಲ್ಲಿ ಮತ್ತು ಬಿಜು ಪಟ್ನಾಯಕ್ ಮಹಿಳಾ ಫುಟ್ಬಾಲ್ ಅಕಾಡೆಮಿಯಲ್ಲಿ ಸುಮಾರು ಐದು ತಿಂಗಳು ತರಬೇತಿ ಪಡೆದಿದ್ದರು.

ಲಕ್ಷ್ಮಿ ದೀನದಲಿತ ಕುಟುಂಬದಿಂದ ಬಂದವರು. ಲಕ್ಷ್ಮೀ ತಾಯಿ ಜನ ಬಹಳ ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಅವರ ತಂದೆ ಬಾಲೈ ಮುಂಡಾ ಅವರಿಗೆ ಈಗ 70 ವರ್ಷ ವಯಸ್ಸಾಗಿದೆ. ಈ ಹಿಂದೆ ಆಕೆಯ ಅಕ್ಕ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಸಹೋದರಿಯ ಮದುವೆಯ ನಂತರ ಮನೆಯ ಜವಾಬ್ದಾರಿಯನ್ನು ಲಕ್ಷ್ಮಿ ವಹಿಸಿಕೊಳ್ಳಬೇಕಾಯಿತು. ಹೀಗಾಗಿ ತನ್ನ ತಂದೆಯನ್ನು ಪೋಷಿಸಲು ಕೃಷಿಭೂಮಿಯಲ್ಲಿ ಬೆವರು ಸುರಿಸುವ ಸ್ಥಿತಿ ಆಕೆಗೆ ಬಂದೊದಗಿದೆ.

‘ನಾನು 10 ವರ್ಷಗಳಿಗೂ ಹೆಚ್ಚು ಕಾಲದಿಂದ ಫುಟ್ಬಾಲ್ ಆಡುತ್ತಿದ್ದೇನೆ. ಗೋವಾ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ 10 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. 2015 ರಲ್ಲಿ, ಇಂಫಾಲ್‌ನಲ್ಲಿ ನಡೆದ ಅಂಡರ್ -17 ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಮತ್ತು 2016 ರಲ್ಲಿ ಅಂಡರ್-19 ರಲ್ಲಿ ಪಂಜಾಬ್‌ನಲ್ಲಿ ನಡೆದ ಮಹಿಳಾ ಲೀಗ್​ನಲ್ಲಿ ಭಾಗವಹಿಸಿದ್ದೇನೆ. ನನಗೆ ಸಾಕಷ್ಟು ಕನಸುಗಳಿವೆ. ಆದರೆ ಅವುಗಳೆಲ್ಲಾ ಕತ್ತಲೆಯದ್ದು, ನನ್ನ ಆಕಾಂಕ್ಷೆಗಳು ಮಸುಕಾಗಿವೆ’ ಎಂದು ಲಕ್ಷ್ಮಿ ಈಟಿವಿ ಭಾರತ್‌ಗೆ ತಿಳಿಸಿದರು.

‘2017 ರಿಂದ ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ. ಆದರೆ ನನಗೆ ಅದ್ರಲ್ಲಿ ಯಶಸ್ಸು ದೊರೆತಿಲ್ಲ. ನನ್ನ ಕುಟುಂಬವನ್ನು ಪೋಷಿಸಲು ಜನರ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಕುಟುಂಬ ಹಸಿವಿನಿಂದ ಮಲಗಲು ನಾನು ಇಷ್ಟಪಡುವುದಿಲ್ಲ’ ಎಂದು ಅವರು ವಿಷಾದಿಸಿದರು.

ಲಕ್ಷ್ಮಿಯೊಬ್ಬಳು ಉತ್ತಮ ವಿದ್ಯಾರ್ಥಿನಿ ಅಷ್ಟೇ ಅಲ್ಲ, ಅವಳೊಬ್ಬಳು ಉತ್ಸಾಹಭರಿತ ಫುಟ್ಬಾಲ್ ಆಟಗಾರ್ತಿಯೂ ಹೌದು. ಲಕ್ಷ್ಮಿ ಹೈಸ್ಕೂಲ್ ಮುಗಿದ ಬಳಿಕ ಡೆಬಾ ರೇ ಕಾಲೇಜ್​ಗೆ ಸೇರಿದರು. ಅಲ್ಲಿ ಲಕ್ಷ್ಮಿಗೆ ಫುಟ್ಬಾಲ್ ಆಡಲು ಅವಕಾಶ ಸಿಕ್ಕಿತು ಎಂದು ಲಕ್ಷ್ಮಿಯ ತರಬೇತುದಾರ ದುಶ್ಯಾಸನ ತಿರಿಯಾ ಆಕೆಯ ಕಠಿಣ ಪರಿಶ್ರಮದ ಬಗ್ಗೆ ಈಟಿವಿ ಭಾರತದೊಂದಿಗೆ ಹಂಚಿಕೊಂಡರು.

ಲಕ್ಷ್ಮಿ ಭುವನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಅವರು ತಮ್ಮ ಫುಟ್ಬಾಲ್​ ಆಟದ ಜೊತೆ ಅಧ್ಯಯನದತ್ತ ಗಮನ ಹರಿಸಿದ್ದಾರೆ. ಆದರೆ ಪ್ರಸ್ತುತ ಕೊರೊನಾದಿಂದಾಗಿ ಪ್ರತಿಭಾವಂತ ಕ್ರೀಡಾ ಆಟಗಾರ್ತಿ ತೀವ್ರ ಬಡತನಕ್ಕೆ ಸಿಲುಕಿದ್ದಾರೆ. ದಿನದ ಎರಡು ಹೊತ್ತು ಊಟಕ್ಕಾಗಿ ಭತ್ತದ ಗದ್ದೆಯಲ್ಲಿ ಕೂಲಿ ಕೆಸಲ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದಾರೆ ಎಂದು ತಿರಿಯಾ ಹೇಳಿದರು.

ಸರ್ಕಾರ ನಮ್ಮ ನೆರವಿಗೆ ಧಾವಿಸಿದ್ರೆ ಬಹಳ ಅನುಕೂಲವಾಗುವುದೆಂದು ಲಕ್ಷ್ಮಿ ಮುಂಡಾ ಮತ್ತು ಆಕೆಯ ಕುಟುಂಬ ಮನವಿ ಮಾಡಿಕೊಂಡಿದೆ.

ABOUT THE AUTHOR

...view details