ಸಂಬಲ್‌ಪುರ:ಒಡಿಶಾದ ಸಂಬಲ್‌ಪುರ ಜಿಲ್ಲೆಯ ರಾಂಪೆಲಾ ಗ್ರಾಮದ ವ್ಯಕ್ತಿಯೊಬ್ಬರು ಕೋವಿಡ್ ರೋಗಿಗಳಿಗೆ ನೆರವಾಗಲು 'ರೋಬೋಟಿಕ್ ನರ್ಸ್' ಎಂಬ ಯಂತ್ರವನ್ನು ಅಭಿವೃದ್ಧಿಪಡಿಸಿದ್ದು, ಇದರ ಸಹಾಯದಿಂದ ಆರೋಗ್ಯ ಸಿಬ್ಬಂದಿಗೆ ಕೊರೊನಾ ಹರಡುವುದನ್ನು ತಡೆಯಬಹುದು ಎಂದಿದ್ದಾರೆ.
ಕೊರೊನಾ ಸೋಂಕಿತರು ಮತ್ತು ಇತರರ ನಡುವಿನ ಸಂಪರ್ಕವನ್ನು ಸೀಮಿತಗೊಳಿಸುವಲ್ಲಿ ಇದು ಬಹಳ ಉಪಯೋಗವಾಗಲಿದೆ ಎಂದು 'ರೋಬೋಟಿಕ್ ನರ್ಸ್' ಡೆವಲಪರ್ ಆಶಿಶ್ ಮಹಾನಾ ಹೇಳಿದ್ದಾರೆ.
ಕೋವಿಡ್ ಸೋಂಕಿತರ ಸಹಾಯಕ್ಕೆ 'ರೋಬೋಟಿಕ್ ನರ್ಸ್' ಅಭಿವೃದ್ಧಿ ರೋಬೋಟ್ಅನ್ನು ರಿಮೋಟ್ ಕಂಟ್ರೋಲ್ ಮತ್ತು ಕೈ ಸನ್ನೆಗಳ ಮೂಲಕ ನಿರ್ವಹಿಸಬಹುದು. ಆಸ್ಪತ್ರೆಯ ಕೋವಿಡ್-19 ವಾರ್ಡ್‌ಗೆ ದಾಖಲಾದ ರೋಗಿಗಳಿಗೆ ಆಹಾರ, ನೀರು ಮತ್ತು ಔಷಧಿಗಳನ್ನು ತಲುಪಿಸಲು ರೋಬೋಟ್ ನೆವಾಗುತ್ತದೆ ಎಂದಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಆಶಿಶ್ ಮಹಾನಾ, 360 ಡಿಗ್ರಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಕ್ಯಾಮರಾವನ್ನು ರೋಬೋಟ್‌ಗೆ ಅಳವಡಿಸಲಾಗಿದೆ. ಮೈಕ್ರೊಫೋನ್, ಸ್ಪೀಕರ್, ಡಸ್ಟ್ ಬಿನ್ ಮತ್ತು ವೈಪರ್ ಸಹ ಇದಕ್ಕೆ ಜೋಡಿಸಲಾಗಿದೆ. ಆಸ್ಪತ್ರೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಲು ಸಹ ಈ ರೋಬೋಟ್ ಸಹಾಯ ಮಾಡುತ್ತದೆ ಎಂದಿದ್ದಾರೆ.