ಕರ್ನಾಟಕ

karnataka

ETV Bharat / bharat

ಚಿಕ್ಕಮ್ಮನ ಶಿರಚ್ಛೇದ: ತಲೆಯೊಂದಿಗೆ ಪೊಲೀಸ್​​ ಠಾಣೆಗೆ ಬಂದ ವ್ಯಕ್ತಿ! - ವ್ಯಕ್ತಿಯಿಂದ ಚಿಕ್ಕಮ್ಮನ ಶಿರಚ್ಛೇದ

ವಾಮಾಚಾರ ಮಾಡುತ್ತಿದ್ದಳು ಎಂಬ ಆರೋಪದ ಮೇಲೆ ಚಿಕ್ಕಮ್ಮನ ಕೊಲೆ ಮಾಡಿರುವ ವ್ಯಕ್ತಿಯೋರ್ವ ಆಕೆಯ ತಲೆಯೊಂದಿಗೆ ಪೊಲೀಸ್​ ಠಾಣೆಗೆ ಬಂದಿರುವ ಘಟನೆ ನಡೆದಿದೆ.

Odisha man beheads aunt
Odisha man beheads aunt

By

Published : Jun 15, 2020, 8:05 PM IST

ಮಯೂರ್ಭಂಜ್​​​(ಒಡಿಶಾ): ಚಿಕ್ಕಮ್ಮನ ಶಿರಚ್ಛೇದ ಮಾಡಿರುವ ವ್ಯಕ್ತಿ ಆಕೆಯ ತಲೆಯೊಂದಿಗೆ ಪೊಲೀಸ್​ ಠಾಣೆಗೆ ಬಂದು ಶರಣಾಗಿರುವ ಘಟನೆ ಒಡಿಶಾದ ಮಯೂರ್ಭಂಜ್​ನ ಕರಾಕಾಚಿಯಾ ಗ್ರಾಮದಲ್ಲಿ ನಡೆದಿದೆ.

ವಾಮಾಚಾರ ನಡೆಸುತ್ತಿದ್ದಳು ಎಂಬ ಅನುಮಾನದ ಮೇಲೆ ಚಿಕ್ಕಮ್ಮನ ತಲೆ ಕತ್ತರಿಸಿರುವ 30 ವರ್ಷದ ವ್ಯಕ್ತಿ 13 ಕಿಲೋ ಮೀಟರ್​ ನಡೆದು ಬಂದು ಪೊಲೀಸ್​ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಲೆಯೊಂದಿಗೆ ಪೊಲೀಸ್​​ ಠಾಣೆಗೆ ಬಂದ ವ್ಯಕ್ತಿ!

ಚಿಕ್ಕಮ್ಮ ಮಾಡಿರುವ ವಾಮಾಚಾರದಿಂದಾಗಿ ಮೂರು ದಿನಗಳ ಹಿಂದೆ ಮಗಳು ಸಾವನ್ನಪ್ಪಿದ್ದಾಳೆ ಎಂದು ಆಕ್ರೋಶಗೊಂಡ ಚಂಪಾ ಸಿಂಗ್​ ಎಂಬಾತ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಇವರಿಬ್ಬರು ಬುಡಕಟ್ಟು ಜನಾಂಗದವರಾಗಿದ್ದು, ಮಹಿಳೆ ಮನೆಯಲ್ಲಿ ಮಲಗಿದ್ದ ವೇಳೆ ಆಕೆಯನ್ನ ಹೊರಗೆ ಎಳೆದುಕೊಂಡು ಬಂದು ಕೊಲೆ ಮಾಡಿದ್ದಾನೆ. ಕೊಲೆ ಮಾಡಲು ಕೊಡಲಿ ಬಳಕೆ ಮಾಡಿದ್ದಾನೆ ಎಂದು ಅಲ್ಲಿನ ಪೊಲೀಸ್​ ಇನ್ಸ್​​ಪೆಕ್ಟರ್​​ ತಿಳಿಸಿದ್ದಾರೆ.

ಘಟನೆ ವೇಳೆ ಅನೇಕರು ಸ್ಥಳದಲ್ಲೇ ಉಪಸ್ಥಿತರಿದ್ದರೂ ಈ ಕೃತ್ಯವನ್ನ ಯಾರೂ ತಡೆದಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಆತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details