ಭುವನೇಶ್ವರ:ದೇಶದಲ್ಲಿ ಮಹಾಮಾರಿ ಕೊರೊನಾ ಹಾವಳಿ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದ್ದು, ಈಗಾಗಲೇ 6 ಸಾವಿರ ಗಡಿ ದಾಟಿದೆ.
ಲಾಕ್ಡೌನ್ ಆದೇಶ ಹೊರಹಾಕಿ 15 ದಿನ ಕಳೆದಿದ್ದರೂ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿಲ್ಲ. ಹೀಗಾಗಿ ಮತ್ತಷ್ಟು ದಿನ ಇದರ ವಿಸ್ತರಣೆ ಮಾಡಬೇಕು ಎಂಬ ಮಾತು ಎಲ್ಲಡೆಯಿಂದ ಗಂಭೀರವಾಗಿ ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಒಂದು ಹೆಜ್ಜೆ ಮುಂದಿಟ್ಟಿರುವ ಒಡಿಶಾ ಸರ್ಕಾರ ಏಪ್ರಿಲ್ 30ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶ ಹೊರಹಾಕಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಮಾಹಿತಿ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಲಾಕ್ಡೌನ್ ಓಪನ್ ಮಾಡಲ್ಲ ಎಂದಿದ್ದಾರೆ. ಇದರ ಜತೆಗೆ ಪ್ರಧಾನಿ ನರೇಂದ್ರ ಬಳಿ ಮನವಿ ಮಾಡಿರುವ ಪಟ್ನಾಯಕ್, ದೇಶದಲ್ಲಿ ರೈಲು ಹಾಗೂ ವಿಮಾನಯಾನ ಆರಂಭಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ಘೋಷಣೆ ಹೊರಹಾಕುವುದಕ್ಕೂ ಮುಂಚಿತವಾಗಿ ನವಿನ್ ಪಟ್ನಾಯಕ್ ಕ್ಯಾಬಿನೆಟ್ ಸಭೆ ನಡೆಸಿ, ತದನಂತರ ಈ ನಿರ್ಧಾರ ಹೊರಹಾಕಿದ್ದಾರೆ. ಒಡಿಶಾದಲ್ಲಿ 42 ಸೋಂಕಿತ ಪ್ರಕರಣ ಕಂಡು ಬಂದಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಇನ್ನು ಪಂಜಾಬ್ನಲ್ಲಿ ಈ ಆದೇಶವನ್ನ ನಿನ್ನೆ ಘೋಷಣೆ ಮಾಡಿ ತದನಂತರ ಹಿಂಪಡೆದುಕೊಳ್ಳಲಾಗಿದೆ.