ಭುವನೇಶ್ವರ್:ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಏರ್ಪಡಿಸಿದ್ದ ಔತಣಕೂಟದಲ್ಲಿ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗಿಯಾಗಿದ್ದರು. ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ.
ಪರಸ್ಪರ ವಿರೋಧಿಗಳು ಪರಸ್ಪರ ಭೋಜನ ಸವಿದಾಗ... ಅಂತಹ ನಾಯಕರಾರು? - ಒಡಿಶಾ ಸಿಎಂ ಏರ್ಪಡಿಸಿದ್ದ ಔತಣಕೂಟ
ಭುವೇನೇಶ್ವರದಲ್ಲಿರುವ ಸಿಎಂ ನವೀನ್ ಪಟ್ನಾಯಕ್ ಮನೆಯಲ್ಲಿ ಈ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ವಿಶೇಷ ಎಂದರೆ ದಿನ ಬೆಳಗಾದರೆ ಕೇಂದ್ರ ವಿರುದ್ಧ ಬೆಂಕಿಯನ್ನೇ ಉಗುಳುವ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಟ್ಟಿಗೆ ಕುಳಿತು ಊಟ ಮಾಡಿದ್ದು ಗಮನ ಸೆಳೆಯುತ್ತಿದೆ.
Odisha: CM Naveen Patnaik hosted a lunch
ಭುವೇನೇಶ್ವರದಲ್ಲಿರುವ ಸಿಎಂ ನವೀನ್ ಪಟ್ನಾಯಕ್ ಮನೆಯಲ್ಲಿ ಈ ಔತಣಕೂಟ ಏರ್ಪಡಿಸಲಾಗಿತ್ತು. ಔತಣಕೂಟದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯಲ್ಲಿ ನಡೆದಿರುವ ಘಟನೆ ನಿಜಕ್ಕೂ ಆಘಾತಕಾರಿ. ಇದು ನಡೆಯಬಾರದಿತ್ತು. ಘಟನೆಯಲ್ಲಿ ಪೊಲೀಸ್ ಪೇದೆ ಹಾಗೂ ಐಬಿ ಅಧಿಕಾರಿ ಸಾವನ್ನಪ್ಪಿದ್ದು, ಅನೇಕ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ಸಹಾಯ ನೀಡಬೇಕು ಎಂದು ಹೇಳಿದ್ದಾರೆ.