ಒಡಿಶಾ: ಪದ್ಮಾವತಿ ಗ್ರಾಮದಲ್ಲಿರುವ ಸುಮಾರು 500 ವರ್ಷಗಳ ಹಳೆಯದಾದ ಗೋಪಿನಾಥ್ ದೇವಾಲಯ ಮಹಾನದಿ ಪ್ರವಾಹದಲ್ಲಿ ಮುಳುಗಿ ಹೋಗಿತ್ತು. ಇದೀಗ ಈ ದೇವಾಲಯ ನದಿಯಲ್ಲಿ ಕಾಣುತ್ತಿದೆ.
ಮಹಾನದಿಯಲ್ಲಿ ಮುಳುಗಿದ್ದ 500 ವರ್ಷದ ಹಳೆಯ ದೇವಾಲಯ ಪತ್ತೆ - ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಭಾರತೀಯ ರಾಷ್ಟ್ರೀಯ ಟ್ರಸ್ಟ್‌ನ ಅನಿಲ್ ಕುಮಾರ್ ಧೀರ್
ಸುಮಾರು 150 ವರ್ಷಗಳ ಹಿಂದೆ ಮಹಾನದಿ ಪ್ರವಾಹದಲ್ಲಿ ಮುಳುಗಿ ಹೋಗಿದ್ದ, 500 ವರ್ಷಗಳ ಹಳೆಯದಾದ ಗೋಪಿನಾಥ್ ದೇವಾಲಯ ಇದೀಗ ನದಿಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ.
ಗೋಪಿನಾಥ್ ದೇವಾಲಯ
ಸುಮಾರು 150 ವರ್ಷಗಳ ಹಿಂದೆ ಮಹಾನದಿ ಪ್ರವಾಹ ಬಂದಾಗ, ಈ ದೇವಾಲಯ ಮತ್ತು ಗ್ರಾಮಗಳು ನದಿಯಲ್ಲಿ ಮುಳುಗಿದ್ದವು ಎಂದು ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಭಾರತೀಯ ರಾಷ್ಟ್ರೀಯ ಟ್ರಸ್ಟ್‌ನ ಅನಿಲ್ ಕುಮಾರ್ ಧೀರ್ ಹೇಳುತ್ತಾರೆ.
ಸುಮಾರು 12 ವರ್ಷಗಳಿಂದ ದೇವಾಲಯದ ಅವಶೇಷಗಳು ಪತ್ತೆಯಾಗುತ್ತಿದ್ದವು. 7 ದಿನದಿಂದ ಸಂಶೋಧಕರು ಇಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಈ ದೇವಾಲಯವೂ 55 - 60 ಅಡಿ ಎತ್ತರವಿದ್ದು, ಕೇವಲ 8 ಅಡಿ ನೀರಿದೆ. ಈಗ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ದೇವಾಲಯ ಕಾಣುತ್ತಿದೆ ಎಂದು ಅನಿಲ್ ಕುಮಾರ್ ಧೀರ್ ಹೇಳಿದ್ದಾರೆ