ಕರ್ನಾಟಕ

karnataka

ಜರ್ಮನಿಯ ವಿವಿಗೆ ಭಾರತದ ಮೊದಲ ಪಿಹೆಚ್​ಡಿ ವಿದ್ಯಾರ್ಥಿನಿಯಾಗಿ ಪ್ರೀತಿ ಸಾಹೊ ಆಯ್ಕೆ

ಜರ್ಮನಿಯ ಮ್ಯೂನಿಚ್‌ನಲ್ಲಿರುವ ಆಸ್ಕರ್ ಲುಡ್ವಿಗ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್​.ಡಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಒಡಿಶಾದ ರಾಯಘಡ ಮೂಲದ ಪ್ರೀತಿ ಪ್ರವಾ ಸಾಹೊ ಆಯ್ಕೆಯಾಗಿದ್ದಾರೆ.

By

Published : Sep 9, 2020, 10:49 AM IST

Published : Sep 9, 2020, 10:49 AM IST

ಪಿಎಚ್​ಡಿ ವಿದ್ಯಾರ್ಥಿಯಾಗಿ ಪ್ರೀತಿ ಪ್ರವಾ ಸಾಹೊ ಆಯ್ಕೆ
ಪಿಎಚ್​ಡಿ ವಿದ್ಯಾರ್ಥಿಯಾಗಿ ಪ್ರೀತಿ ಪ್ರವಾ ಸಾಹೊ ಆಯ್ಕೆ

ರಾಯಗಡ (ಒಡಿಶಾ):ಜರ್ಮನಿಯ ಮ್ಯೂನಿಚ್‌ನಲ್ಲಿರುವ ಆಸ್ಕರ್ ಲುಡ್ವಿಗ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್​.ಡಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಒಡಿಶಾದ ರಾಯಗಡ ಮೂಲದ ಪ್ರೀತಿ ಪ್ರವಾ ಸಾಹೊ ಆಯ್ಕೆಯಾಗಿದ್ದಾರೆ. ಸಂಶೋಧನಾ ಕಾರ್ಯ ನಡೆಸಲು ಆಯ್ಕೆಯಾದ ಭಾರತದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪ್ರೀತಿ ಪಾತ್ರರಾಗಿದ್ದಾರೆ.

ಸಂಗೀತಾ ಸಾಹೊ ಮತ್ತು ಪ್ರಭಾಕರ್ ಸಾಹೊ ಎಂಬವರ ಪುತ್ರಿ ಪ್ರೀತಿ ಪ್ರವಾ ಸಾಹೊ 600 ವರ್ಷಗಳ ಹಳೆಯ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿಯಲ್ಲಿ ಪಿಹೆಚ್‌ಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿಯನ್ನು ವಿಶ್ವವಿದ್ಯಾಲಯ ಪ್ರಕಟಿಸಿದ್ದು, ವಿಶ್ವದಾದ್ಯಂತ 14 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಪ್ರೀತಿ ಸಾಹೊ ಸಹ ಕೂಡ ಒಬ್ಬರು.

ಪ್ರೀತಿ ವಿಶ್ವದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಲು ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾದ ವಿಲ್ಹೆಲ್ಮ್ ರೊಂಟ್ಜೆನ್, ಮ್ಯಾಕ್ಸ್ ಪ್ಲ್ಯಾಂಕ್, ವರ್ನರ್ ಹೈಸೆನ್ಬರ್ಗ್, ಒಟ್ಟೊ ಹಾನ್ ಮತ್ತು ಥಾಮಸ್ ಮನ್​ನಂಥಹ ಗಣ್ಯಾತಿಗಣ್ಯರು ವಿದ್ಯಾಭ್ಯಾಸ ಪಡೆದಿದ್ದರು.

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಸಂತಸ ಹಂಚಿಕೊಂಡಿರುವ ಪ್ರೀತಿ, "ನನಗೆ ಬಾಲ್ಯದಿಂದಲೂ ಜೀವಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಎನ್ಐಎಸ್ಇಆರ್​ನಲ್ಲಿದ್ದ ಸಮಯದಲ್ಲಿ, ಮೈಕ್ರೋಬಯಾಲಜಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಅವಕಾಶ ನನಗೆ ದೊರಕಿತು. ಅದರಲ್ಲಿ ನಾನು ನನ್ನ ಸಂಶೋಧನೆ ನಡೆಸಲಿದ್ದೇನೆ" ಎಂದು ಹೇಳಿದರು.

"ನಾನು ಭಾರತದಿಂದ ಈ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ಹೊರಟಿರುವ ಮೊದಲ ಹುಡುಗಿಯಾಗಿದ್ದೇನೆ. ನನ್ನ ಪೋಷಕರು ನನ್ನ ಬೆಂಬಲದ ಆಧಾರ ಸ್ತಂಭಗಳಾಗಿದ್ದಾರೆ. ಅವರು ಯಾವಾಗಲೂ ನನ್ನ ಕನಸುಗಳನ್ನು ಈಡೇರಿಸಲು ಶ್ರಮಪಟ್ಟಿದ್ದಾರೆ. ನನಗೆ ಮಾರ್ಗದರ್ಶನ ನೀಡಿದ ನನ್ನ ಶಿಕ್ಷಕರಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ" ಎಂದು ಪ್ರೀತಿ ಹೇಳುತ್ತಾರೆ.

ABOUT THE AUTHOR

...view details