ಕರ್ನಾಟಕ

karnataka

ETV Bharat / bharat

ಗ್ರಾಹಕರೇ ಗಮನಿಸಿ: ಈ ಒಂದು ದಿನ ಬ್ಯಾಂಕ್ ಮುಷ್ಕರ..! - ಬ್ಯಾಂಕ್ ಬಂದ್ ಸುದ್ದಿ

ಆಲ್​ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಗಳು ಅ.22ರಂದು ದೇಶಾದ್ಯಂತ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ.

ಬ್ಯಾಂಕ್ ಮುಷ್ಕರ

By

Published : Oct 20, 2019, 1:04 PM IST

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಒಕ್ಕೂಟ ಅ.23ರಂದು ಬ್ಯಾಂಕ್ ಬಂದ್​ಗೆ ಕರೆ ನೀಡಿದ್ದು, ಸೇವೆಯಲ್ಲಿ ಕೊಂಚ ವ್ಯತ್ಯಯವಾಗಲಿದೆ ಎಂದು ಓರಿಯೆಂಟಲ್​​ ಬ್ಯಾಂಕ್ ಆಫ್ ಕಾಮರ್ಸ್ ಹೇಳಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಂಡಿಕೇಟ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸಹ ತನ್ನ ಬ್ಯಾಂಕ್​ಗಳಲ್ಲಿ ಅ.22ರಂದು ಸೇವೆ ಏರುಪೇರಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ. ಆದರೆ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುವ ಮಾಹಿತಿ ಬಂದಿದೆ.

ಈ ಒಂದು ದಿನದ ಮುಷ್ಕರದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳು ಭಾಗಿಯಾಗಲಿವೆ. ಆದರೆ ಕೋ-ಆಪರೇಟಿವ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳು ಎಂದಿನಂತೇ ಕಾರ್ಯನಿರ್ವಹಿಸಲಿವೆ.

ಡಾ.ಸಿಂಗ್ - ರಾಜನ್​ ಕಾಲದಲ್ಲೂ ಬ್ಯಾಂಕಿಂಗ್ ವಲಯ ಕೆಟ್ಟ ದಿನಗಳನ್ನ ಎದುರಿಸಿದೆ: ನಿರ್ಮಲಾ ಸೀತಾರಾಮನ್ ವಾದ

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‌ಐ) ಅಕ್ಟೋಬರ್ 22ರ ಬೆಳಗ್ಗೆ 6 ರಿಂದ ಅಕ್ಟೋಬರ್ 23ರವರೆಗೆ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್​ಗಳ ಸಂಘಕ್ಕೆ ನೋಟಿಸ್ ಮೂಲಕ ತಿಳಿಸಿವೆ.

ಬೇಡಿಕೆ ಏನು?

ಬ್ಯಾಂಕಿಂಗ್ ಉದ್ಯೋಗಗಳ ಹೊರಗುತ್ತಿಗೆ, ಬ್ಯಾಂಕ್​ಗಳ ಖಾಸಗೀಕರಣ, ಕ್ಲರಿಕಲ್ ಮತ್ತು ಉಪಸಿಬ್ಬಂದಿಗಳ ಸಮರ್ಪಕ ನೇಮಕಾತಿ ಮತ್ತು ಕೆಟ್ಟ ಸಾಲಗಳನ್ನು ಮರುಪಡೆಯಲು ಕಠಿಣ ಕ್ರಮಗಳ ಜಾರಿ ಹಾಗೂ ಬ್ಯಾಂಕುಗಳ ಮಹಾವಿಲೀನವನ್ನು ವಿರೋಧಿಸಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಕಳೆದ ತಿಂಗಳ 26 ಹಾಗೂ 27ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ ಸರ್ಕಾರದ ಮಧ್ಯಪ್ರವೇಶದ ಬಳಿಕ ಕೊನೇಯ ಕ್ಷಣದಲ್ಲಿ ಬಂದ್ ಹಿಂಪಡೆಯಲಾಗಿತ್ತು.

ABOUT THE AUTHOR

...view details