ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತವು ಪಶ್ಚಿಮದ ಅತ್ಯಂತ ಕೆಟ್ಟ ರೂಢಿಗತ ರಾಷ್ಟ್ರ. ಎಲ್ಲಕ್ಕಿಂತ ಹೆಚ್ಚಾಗಿ ವ್ಯಾಪಕವಾಗಿ ಹಬ್ಬಿದ ಹಿಂಸಾಚಾರ ಮತ್ತು ರಾಜಕೀಯದ ಸುತ್ತ ಧರ್ಮ, ಕುಲ ಮತ್ತು ಜಾತಿಗಳು ಆವರಿಸಿದ ದೇಶವಾಗಿದೆ ಎಂದು ತಮ್ಮ ಇತ್ತೀಚಿನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
ಯುರೋಪಿಯನ್ ಮೂಲದ ಸೋನಿಯಾ ಗಾಂಧಿ ಅವರ ಬಗ್ಗೆ ಬರೆದು, ಅಲ್ಪಸಂಖ್ಯಾತರ ಸಮುದಾಯದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯಾಗಿ ನೇಮಿಸಬಲ್ಲ ಅತ್ಯಂತ ಪ್ರಬಲ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಜನರು ಅತಂತ್ರರಾಗಿ ವಾಸಿಸುತ್ತಿದ್ದಾರೆ. ಬಿಸಿಲಿನ ಹಳ್ಳಿಗಳಲ್ಲಿ ಅಥವಾ ಚಕ್ರವ್ಯೂಹದಂತಹ ಕೊಳಗೇರಿಗಳಲ್ಲಿ ಜನರು ಸಿಲುಕಿಕೊಂಡರೂ ಭಾರತೀಯ ಉದ್ಯಮದ ದಿಗ್ಗಜರು ರಾಜವಂಶಸ್ಥರು ಮತ್ತು ಮೊಘಲರು ಅಸೂಯೆ ಪಡುವಂತಹ ಜೀವನಶೈಲಿಯನ್ನು ಆನಂದಿಸುತ್ತಿದ್ದರು ಎಂದು 'ಎ ಪ್ರಾಮಿಸ್ಡ್ ಲ್ಯಾಂಡ್' ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ಹಿಂಸಾಚಾರವು ಭಾರತೀಯರ ಜೀವನದ ಎಲ್ಲಕ್ಕಿಂತ ಹೆಚ್ಚು ವ್ಯಾಪಕವಾದ ಭಾಗವಾಗಿ ಉಳಿದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಚಿತ್ರಣವನ್ನು ಅವರು ತಮ್ಮ ಓದುಗರಿಗೆ ಅತಿರೇಕದ ಸಮಾಧಾನದಿಂದ ಉತ್ತರ ನೀಡಿದ್ದಾರೆ. ಅಧ್ಯಕ್ಷರಾಗುವ ಮೊದಲು ದೇಶಕ್ಕೆ ಪ್ರಯಾಣಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೂ " ಈ ದೇಶವು ಯಾವಾಗಲೂ ನನ್ನ ಕಲ್ಪನೆಯಲ್ಲಿ ವಿಶೇಷ ಸ್ಥಾನ ಪಡೆದಿತ್ತು" ಎಂದಿದ್ದಾರೆ.
ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ಹಗೆತನ ವ್ಯಕ್ತಪಡಿಸುವುದು ಈಗಲೂ ರಾಷ್ಟ್ರೀಯ ಏಕತೆಗೆ ತಕ್ಷಣಕ್ಕೆ ಸ್ಪಂದಿಸುವ ಮಾರ್ಗವಾಗಿ ಉಳಿದಿದೆ ಎಂದು ಬರೆದಿದ್ದಾರೆ.
ಪಾಕಿಸ್ತಾನದ ಎನ್-ಬಾಂಬ್‌ಗೆ ಪ್ರತಿಯಾಗಿ ಭಾರತವು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಎಂಬ ಧಾಟಿಯಲ್ಲಿ, 'ಅನೇಕ ಭಾರತೀಯರು ತಮ್ಮ ದೇಶವು ಪಾಕಿಸ್ತಾನಕ್ಕೆ ಸರಿಸಮನಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ ಎಂಬುದರ ಜ್ಞಾನದ ಬಗ್ಗೆ ಬಹಳ ಹೆಮ್ಮೆ ಪಡುತ್ತಾರೆ. ಒಂದೇ ಒಂದು ತಪ್ಪು ಎರಡೂ ಕಡೆ ಲೆಕ್ಕಾಚಾರದ ಪ್ರಾದೇಶಿಕ ಪತನಕ್ಕೆ ಕಾರಣವಾಗಬಹುದು ಎಂದಿದ್ದಾರೆ.
ರೂಢಿಗತವಾದ ಪ್ರಲೋಭನೆ ನಿವಾರಿಸಲು ಸಾಧ್ಯವಿಲ್ಲ. ಅನೇಕ ವಿಷಯಗಳಲ್ಲಿ ನವಭಾರತವು ಯಶಸ್ಸಿನ ಕಥೆಯೆಂದು ಪರಿಗಣಿತವಾಗಿದೆ. ಸರ್ಕಾರದಲ್ಲಿ ಆಗಾಗ ಸಂಭವಿಸುವ ಬದಲಾವಣೆಗಳಿಂದ ಬದುಕುಳಿದಿದೆ. ರಾಜಕೀಯ ಪಕ್ಷಗಳಲ್ಲಿನ ಕಹಿಯಾದ ದ್ವೇಷ, ನಾನಾ ಸಶಸ್ತ್ರ ಪ್ರತ್ಯೇಕತಾವಾದಿ ಚಳುವಳಿಗಳು ಮತ್ತು ಎಲ್ಲಾ ರೀತಿಯ ಭ್ರಷ್ಟಾಚಾರ ಹಗರಣಗಳು ಮನೆ ಮಾಡಿವೆ ಎಂದಿದ್ದಾರೆ.
1990ರ ದಶಕದಲ್ಲಿ ಮಾರುಕಟ್ಟೆ ಆಧಾರಿತ ಆರ್ಥಿಕತೆ ಪರಿವರ್ತನೆಯು ಭಾರತೀಯರ ಅಸಾಧಾರಣ ಉದ್ಯಮಶೀಲ ಪ್ರತಿಭೆ ಜಗತ್ತಿನ ಮುಂದೆ ಬಿಚ್ಚಿಟ್ಟಿತು. ಅದು ಬೆಳವಣಿಗೆಯ ದರ, ಅಭಿವೃದ್ಧಿ ಹೊಂದುತ್ತಿರುವ ಹೈಟೆಕ್ ವಲಯ ಮತ್ತು ಸ್ಥಿರವಾಗಿ ವಿಸ್ತರಿಸುತ್ತಿರುವ ಮಧ್ಯಮ ವರ್ಗದ ಅಭ್ಯುದಯಕ್ಕೆ ಕಾರಣವಾಯಿತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆಗಳು ಲಕ್ಷಾಂತರ ಜನರನ್ನು ಬಡತನದಿಂದ ಪಾರು ಮಾಡಿವೆ ಎಂದು ಶ್ಲಾಘಿಸಿ ಬರೆದಿದ್ದಾರೆ.
ಅದರ ನಿಜವಾದ ಆರ್ಥಿಕ ಪ್ರಗತಿಯ ಹೊರತಾಗಿಯೂ ಭಾರತವು ಅತಂತ್ರವಾಗಿರುವ ಮತ್ತು ಬಡತನದ ಬೀಡಾಗಿ ಉಳಿದಿದೆ. ಬಹುತೇಕ ಧರ್ಮ ಮತ್ತು ಜಾತಿಗಳಿಂದ ವಿಂಗಡಿಸಲ್ಪಟ್ಟಿದೆ. ಭ್ರಷ್ಟ ಸ್ಥಳೀಯ ಅಧಿಕಾರಿಗಳು ಮತ್ತು ಅಧಿಕಾರದ ದಲ್ಲಾಳಿಗಳ ಆಶಯಗಳು ಜನರನ್ನು ಸೆರೆ ಹಿಡಿದಿಟ್ಟಿವೆ. ಇದು ಒಂದು ಪ್ರಾದೇಶಿಕ ಅಧಿಕಾರಶಾಹಿಯಿಂದ ವಿರೋಧಿಸಲ್ಪಟ್ಟ ಬದಲಾವಣೆ ಎಂದು ಒಬಾಮ ವ್ಯಾಖ್ಯಾನಿಸಿದ್ದಾರೆ.