ನವದೆಹಲಿ:ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಚರಿತ್ರೆ ಪುಸ್ತಕದಲ್ಲಿ ಡಾ. ಮನಮೋಹನ್ ಸಿಂಗ್ ಬಗ್ಗೆ ಅಪಾರ ಪ್ರಶಂಸೆ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೂ ಅದರಲ್ಲಿ ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಸರಣಿ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಬಿಡುಗಡೆಯಾದ ಒಬಾಮರ ಎರಡು ಭಾಗಗಳ ಆತ್ಮಚರಿತ್ರೆ "ಎ ಪ್ರಾಮಿಸ್ಡ್ ಲ್ಯಾಂಡ್"ನ ಮುಂಗಡ ಪ್ರತಿ ತಾವು ಹೊಂದಿರುವುದಾಗಿ ತರೂರ್ ಬರೆದುಕೊಂಡಿದ್ದಾರೆ. ಭಾರತಕ್ಕೆ ಸಂಬಂಧಿಸಿದ ಪ್ರತಿ ವಿವರ ಓದಿರುವುದಾಗಿ ಅವರು ತಿಳಿಸಿದ್ದಾರೆ.
ಬಿಗ್ ನ್ಯೂಸ್ : ಹೆಚ್ಚಿನದ್ದು ಏನೂ ಇಲ್ಲ. ದೊಡ್ಡ ಸುದ್ದಿ: 902 ಪುಟಗಳಲ್ಲಿ ನರೇಂದ್ರ ಮೋದಿ ಅವರನ್ನು ಹೆಸರಿನಿಂದ ಉಲ್ಲೇಖಿಸಲಾಗಿಲ್ಲ ಎಂದು ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಟ್ವೀಟ್ ಮಾಡಿದ್ದಾರೆ.
ಬುದ್ಧಿವಂತ, ಚಿಂತನಶೀಲ ಮತ್ತು ಚುರುಕಾದ ಪ್ರಾಮಾಣಿಕ, ಅಸಾಮಾನ್ಯ ಬುದ್ಧಿವಂತಿಕೆ ಮತ್ತು ಸಭ್ಯತೆಯ ವ್ಯಕ್ತಿ ಎಂಬುದಾಗಿ ಪ್ರೀತಿಯಿಂದ ವರ್ಣಿಸಲ್ಪಟ್ಟ ಡಾ. ಮನಮೋಹನ್ ಸಿಂಗ್ ಅವರಿಗೆ ಭಾರಿ ಹೊಗಳಿಕೆ ಇದೆ. ಗೌರವ ಮತ್ತು ಮನ್ನಣೆ ನೀಡಲಾಗಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷ ಒಬಾಮಾ ಹಿಂಸೆ, ದುರಾಸೆ, ಭ್ರಷ್ಟಾಚಾರ, ರಾಷ್ಟ್ರೀಯತೆ, ವರ್ಣಭೇದ ನೀತಿ ಮತ್ತು ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಎಂದು ತರೂರ್ ಪುಸ್ತಕದ ಬಗ್ಗೆ ಕಿರು ವಿಮರ್ಶೆ ಮಾಡಿ ಉಲ್ಲೇಖಿಸಿದ್ದಾರೆ.