ಕರ್ನಾಟಕ

karnataka

ETV Bharat / bharat

ನ್ಯೂಯಾರ್ಕ್​​ನಲ್ಲಿ ಅಬ್ಬರಿಸುತ್ತಿದೆ ಕೊರೊನಾ: ಪ್ರತಿ ಎರಡೂವರೆ ನಿಮಿಷಕ್ಕೆ ಓರ್ವ ಸಾವು - corona in america

ಅಮೆರಿಕದ ನ್ಯೂಯಾರ್ಕ್​ನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಪ್ರತಿ ಎರಡೂವರೆ ನಿಮಿಷಕ್ಕೆ ಒಬ್ಬ ವ್ಯಕ್ತಿ ಕೋವಿಡ್​-19 ಸೋಂಕಿಗೆ ಸಾವನ್ನಪ್ಪುತ್ತಿದ್ದಾನೆ ಎಂದು ಅಲ್ಲಿನ ಗವರ್ನರ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾ
corona

By

Published : Apr 5, 2020, 12:38 PM IST

ನ್ಯೂಯಾರ್ಕ್​ (ಅಮೆರಿಕ): ನ್ಯೂಯಾರ್ಕ್​ ಕೊರೊನಾ ವೈರಸ್​ನ ಪ್ರಮುಖ ಕೇಂದ್ರವಾಗಿ ಮಾರ್ಪಡುತ್ತಿದೆ. ಕೇವಲ 24 ಗಂಟೆಗಳಲ್ಲಿ 630 ಮಂದಿ ಸಾವನ್ನಪ್ಪಿದ್ದು ಮರಣದ ಪ್ರಮಾಣ ತೀವ್ರವಾಗಿದೆ ಎಂದು ನ್ಯೂಯಾರ್ಕ್​ ರಾಜ್ಯದ ಗೌವರ್ನರ್​ ಆ್ಯಂಡ್ರೂ ಕೌಮೋ ಹೇಳಿದ್ದಾರೆ.

ಏಪ್ರಿಲ್ 2 ಮತ್ತು 3ನೇ ತಾರೀಕಿನ ಮಧ್ಯೆ 562 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ಎರಡೂವರೆ ನಿಮಿಷಕ್ಕೆ ಓರ್ವ ಮಹಾಮಾರಿ ಸೋಂಕಿಗೆ ಬಲಿಯಾಗುತ್ತಿದ್ದಾನೆ. ಏಪ್ರಿಲ್​ 4ರಂದು ಒಂದೇ ದಿನದಲ್ಲಿ 630 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಅಮೆರಿಕದಲ್ಲಿ 3,12,146 ಮಂದಿ ಸೋಂಕಿತರಿದ್ದು, ನ್ಯೂಯಾರ್ಕ್​ ರಾಜ್ಯವೊಂದರಲ್ಲೇ ಸೋಂಕಿತರ ಸಂಖ್ಯೆ 1,13,704ರಷ್ಟಿದೆ. ನ್ಯೂಯಾರ್ಕ್​ ನಂತರ ನ್ಯೂಜೆರ್ಸಿ ಕೊರೊನಾದಿಂದ ತೀವ್ರ ಹಾನಿಗೊಳಗಾದ ರಾಜ್ಯವಾಗಿದೆ. ಇಲ್ಲಿ 30 ಸಾವಿರ ಮಂದಿ ಸೋಂಕಿತರಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ನ್ಯೂಯಾರ್ಕ್​ ರಾಜ್ಯದಲ್ಲಿ 85 ಸಾವಿರ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಇದರಲ್ಲಿ 22 ಸಾವಿರ ಮಂದಿ ಹೊರ ರಾಜ್ಯಗಳಿಂದ ಕರೆಸಿಕೊಳ್ಳಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳನ್ನು ಕೂಡಾ ಕೊರೊನಾ ವಿರುದ್ಧದ ಸಮರದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗವರ್ನರ್​ ತಿಳಿಸಿದ್ದಾರೆ.

ABOUT THE AUTHOR

...view details