ನವದೆಹಲಿ: ಏಪ್ರಿಲ್ 30 ರಂದು ಕರ್ತವ್ಯದಲ್ಲಿದ್ದಾಗ ಕೋವಿಡ್ ಸೋಂಕಿಗೆ ತುತ್ತಾಗಿದ್ದ ವೈದ್ಯಕೀಯ ಸಿಬ್ಬಂದಿ ಭಲ್ಲರಾಂ ಪುರೋಹಿತ್ ಪ್ಲಾಸ್ಮಾ ದಾನ ಮಾಡಿದ ಏಮ್ಸ್ನ ಮೊದಲ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ಲಾಸ್ಮಾ ದಾನ ಮಾಡಿದ ಏಮ್ಸ್ನ ಮೊದಲ ಸಿಬ್ಬಂದಿ ಭಲ್ಲರಾಂ ಪುರೋಹಿತ್ - ಕೊರೊನಾ ಮುಕ್ತರಾದ ನರ್ಸಿಂಗ್ ಅಧಿಕಾರಿ
ಏಮ್ಸ್ನ ತುರ್ತು ವಿಭಾಗದಲ್ಲಿ ಕಾರ್ಯನಿರ್ವಹಿಸುವ ನರ್ಸಿಂಗ್ ಅಧಿಕಾರಿ ಭಲ್ಲರಾಂ ಪುರೋಹಿತ್ ಕೋವಿಡ್ ಮುಕ್ತರಾದ ಬಳಿಕ ಇನ್ನೋರ್ವ ರೋಗಿಗೆ ಪ್ಲಾಸ್ಮಾ ದಾನ ಮಾಡಿದ್ದಾರೆ.
ಪ್ಲಾಸ್ಮಾ ದಾನ ಮಾಡಿದ ಏಮ್ಸ್ನ ಮೊದಲ ಸಿಬ್ಬಂದಿ ಭಲ್ಲರಾಂ ಪುರೋಹಿತ್
ಕೋವಿಡ್ ಪಾಸಿಟಿವ್ ಬಂದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಭಲ್ಲರಾಂ ಅವರನ್ನು ಜಜ್ಜರ್ ಕ್ಯಾಂಪಸ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ 14 ದಿನಗಳ ಚಿಕಿತ್ಸೆ ಪಡೆದ ಬಳಿಕ ಕೊರೊನಾ ಮುಕ್ತರಾಗಿದ್ದರು ಮತ್ತು ಮೇ. 15 ರಂದು ನಡೆಸಿದ ಪರೀಕ್ಷೆಯ ವರದಿ ನೆಗೆಟಿವ್ ಬಂದಿತ್ತು.
ಮೂಲತಃ ರಾಜಸ್ಥಾನದ ನಿವಾಸಿಯಾದ ಭಲ್ಲಾರಂ ಪುರೋಹಿತ್ ಏಮ್ಸ್ನ ತುರ್ತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಮೆಡಂತಾ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ದಾಖಲಾದ ಕೋವಿಡ್ ಬಾಧಿತ ಹಿರಿಯ ವ್ಯಕ್ತಿಯೊಬ್ಬರಿಗೆ ಭಲ್ಲರಾಂ ಪ್ಲಾಸ್ಮಾ ದಾನ ಮಾಡಿದ್ದಾರೆ. ಈ ಮೂಲಕ ರೋಗಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದ್ದಾರೆ.