ಬಿಹಾರ :ಚೀನಾ ಜೊತೆಗಿನ ಘರ್ಷಣೆಯಲ್ಲಿ ಹುತಾತ್ಮರಾದ ವೀರಯೋಧ ಸಿಪಾಯ್ ಜೈ ಕಿಶೋರ್ ಸಿಂಗ್ ಪಾರ್ಥಿವ ಶರೀರ ಅವರ ನಿವಾಸಕ್ಕೆ ತಲುಪಿದ್ದು, ಜನರು ಭಾರತ ಮಾತಾಕಿ ಜೈ ಘೊಷಣೆಗಳೊಂದಿಗೆ ಗೌರವ ಸಲ್ಲಿಸಿದರು.
ಸ್ವಗ್ರಾಮ ತಲುಪಿದ ವೀರ ಯೋಧ ಸಿಪಾಯ್ ಜೈ ಕಿಶೋರ್ ಸಿಂಗ್ ಪಾರ್ಥಿವ ಶರೀರ - China border conflict
ಜೂನ್ 15 ರಂದು ಗಾಲ್ವಾನ್ ವ್ಯಾಲಿಯಲ್ಲಿ ನಡೆದ ಗಡಿ ಘರ್ಷಣೆಯಲ್ಲಿ ಮೃತಪಟ್ಟಿದ್ದ ಬಿಹಾರದ ವೀರ ಯೋಧ ಸಿಪಾಯ್ ಜೈ ಕಿಶೋರ್ ಸಿಂಗ್ ಮೃತದೇಹ ಮನೆಗೆ ತಲುಪಿದ್ದು, ನೆರೆದಿದ್ದ ಜನರು ಜೈಕಾರಗಳೊಂದಿಗೆ ಅಂತಿಮ ನಮನ ಸಲ್ಲಿಸಿದರು.

ಸ್ವಗ್ರಾಮ ತಲುಪಿದ ಯೋಧನ ಪಾರ್ಥೀವ ಶರೀರ
ಸ್ವಗ್ರಾಮ ತಲುಪಿದ ಯೋಧನ ಪಾರ್ಥಿವ ಶರೀರ
ವೈಶಾಲಿಯ ಚಕ್ ಫತೇಹ್ ಗ್ರಾಮದವರಾದ ಸಿಪಾಯ್ ಜೈ ಕಿಶೋರ್ ಸಿಂಗ್, ಜೂನ್ 15 ರಂದು ಗಾಲ್ವಾನ್ ವ್ಯಾಲಿಯಲ್ಲಿ ನಡೆದ ಗಡಿ ಘರ್ಷಣೆಯಲ್ಲಿ ಮೃತಪಟ್ಟಿದ್ದರು. ಯೋಧನ ಮೃತದೇಹ ಸೇನಾ ವಾಹನದಲ್ಲಿ ನಿವಾಸಕ್ಕೆ ತರುತ್ತಿದ್ದಂತೆ ಸೇರಿದ್ದ ನೂರಾರು ಜನ 'ಭಾರತ್ ಮಾತಾ ಕಿ ಜೈ' ಮತ್ತು 'ಜೈ ಕಿಶೋರ್ ಅಮರ್ ರಹೇ ಎಂಬ ಘೋಷಣೆಗಳೊಂದಿಗೆ ವೀರ ಪುತ್ರನಿಗೆ ಅಂತಿಮ ನಮನ ಸಲ್ಲಿಸಿದರು.
Last Updated : Jun 19, 2020, 9:35 AM IST