ಕರ್ನಾಟಕ

karnataka

ETV Bharat / bharat

ಅನ್​​ಲಾಕ್​ ಬಳಿಕ ವಿಮಾನಯಾನ ಯಥಾಸ್ಥಿತಿ.. ಒಂದೇ ದಿನ ಸಂಚರಿಸಿದ ಪ್ರಯಾಣಿಕರೆಷ್ಟು ಗೊತ್ತಾ..? - ವಿಮಾನಯಾನ ಆರಂಭ

ಕೊರೊನಾ ವಿಪರೀತವಾಗಿ ಹರಡುತ್ತಿದ್ದ ಸಮಯದಲ್ಲಿ ಕೇಂದ್ರ ಸರ್ಕಾರ ಲಾಕ್​​​ಡೌನ್​​ ವಿಧಿಸಿ ನಂತರ ಮಾರ್ಚ್​ 25 ರಂದು ನಾಗರಿಕ ವಿಮಾನಯಾನವನ್ನು ನಿಷೇಧಿಸಿತ್ತು. ಬಳಿಕ ಮೇ 25ರಂದು ದೇಶೀಯ ವಿಮಾನಯಾನದ ಮೇಲಿದ್ದ ನಿಷೇಧವನ್ನು ಹಂತ ಹಂತವಾಗಿ ತೆರವುಗೊಳಿಸುತ್ತಾ ಸಾಗಿತ್ತು.

number-of-passengers-flying-in-single-day-rises-to-168-860
ಕೊರೊನಾ ಅನ್​​ಲಾಕ್​ ಬಳಿಕ ವಿಮಾನಯಾನ ಯಥಾಸ್ಥಿತಿ

By

Published : Oct 5, 2020, 4:01 PM IST

ನವದೆಹಲಿ:ಕೊರೊನಾ ಕಾಲದಲ್ಲಿ ವಿಮಾನಯಾನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆಯ್ದ ಕಲವೇ ಕೆಲವು ವಿಮಾನ ಹಾರಾಟ ಪ್ರಕ್ರಿಯೆ ಮಾತ್ರ ಚಾಲ್ತಿಯಲ್ಲಿತ್ತು. ಇದಾದ ಬಳಿಕ ವಿಮಾನಯಾನಕ್ಕೆ ಹಂತ ಹಂತವಾಗಿ ಅವಕಾಶ ಕಲ್ಪಿಸಲಾಗಿದ್ದು, ನಿನ್ನೆ ಒಂದೇ ದಿನ 1,68,860 ಮಂದಿ ಸಂಚರಿಸಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದಿಪ್​​​ ಸಿಂಗ್​​ ಪುರಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು ಕೋವಿಡ್ ಪೂರ್ವದಲ್ಲಿ ನಡೆಯುತ್ತಿದ್ದ ಹಾರಾಟದ ಅಂಕಿ ಅಂಶಗಳ ಹತ್ತಿರಕ್ಕೆ ತಲುಪಿದೆ ಎಂದಿದ್ದಾರೆ.

ಈ ವೇಳೆ 1,458 ದೇಶೀಯ ವಿಮಾನಗಳಲ್ಲಿ 1,65,860 ಮಂದಿ ಪ್ರಯಾಣಿಸಿದ್ದಾರೆ. ಅಲ್ಲದೆ 3,37,234 ಮಂದಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕೊರೊನಾ ವಿಪರೀತವಾಗಿ ಹರಡುತ್ತಿದ್ದ ಸಮಯದಲ್ಲಿ ಕೇಂದ್ರ ಸರ್ಕಾರ ಲಾಕ್​​​ಡೌನ್​​ ವಿಧಿಸಿ ನಂತರ ಮಾರ್ಚ್​ 25 ರಂದು ನಾಗರಿಕ ವಿಮಾನಯಾನವನ್ನು ನಿಷೇಧಿಸಿತ್ತು. ಬಳಿಕ ಮೇ 25ರ ಬಳಿಕ ದೇಶೀಯ ವಿಮಾನಯಾನದ ಮೇಲಿದ್ದ ನಿಷೇಧವನ್ನು ಹಂತ ಹಂತವಾಗಿ ತೆರವುಗೊಳಿಸಲಾಗಿತ್ತು.

ABOUT THE AUTHOR

...view details