ನವದೆಹಲಿ: ಭೀಕರ ಪ್ರವಾಹದಲ್ಲಿ ಸಂಕಷ್ಟಕ್ಕೊಳಗಾದ ರಾಜ್ಯದ ಜನರಿಗೆ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಪರಿಹಾರಧನ ಮಂಜೂರಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದು, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಹರಿಹಾಯ್ದಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರದ ಧೋರಣೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
'ನೆರೆ'ವಾಗದ ಕೇಂದ್ರ: ಟ್ವಿಟರ್ನಲ್ಲಿ #NotFairModiji ಆಕ್ರೋಶ - #NotFairModiji
ರಾಜ್ಯದಲ್ಲಿ ಉಂಟಾಗಿರುವ ಭೀಕರ ನೆರೆ ಪ್ರವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಬಿಡಿಗಾಸು ನೀಡಿಲ್ಲ. ಈ ಮಧ್ಯೆ ಟ್ವಿಟ್ಟರ್‌ನಲ್ಲಿ #NotFairModiji ಅಭಿಯಾನ ಶುರುವಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯಕ್ಕೆ ನೆರೆ ಪರಿಹಾರ ನೀಡದ ಕೇಂದ್ರ
ಟ್ವಿಟ್ಟರ್‌ನಲ್ಲಿ ನೆರೆ ಪರಿಹಾರ ವಿಷಯವನ್ನಿಟ್ಟುಕೊಂಡು ನೆಟ್ಟಿಗರು ಕೇಂದ್ರದ ವಿರುದ್ಧ ಸಮರ ಸಾರಿದ್ದಾರೆ. ಪರಿಹಾರದ ವಿಚಾರದಲ್ಲಿ ಕರ್ನಾಟಕದತ್ತ ಗಮನಕೊಡಿ ಎಂದು ಟ್ವಿಟರ್ನಲ್ಲಿ #WeWantFloodRelief ಎಂಬ ಹ್ಯಾಷ್ಟ್ಯಾಗ್ ಮೂಲಕ #NotFairModiji ಟ್ರೆಂಡಿಂಗ್ ಆರಂಭಿಸಿದ್ದಾರೆ. ಈ ವಿಷಯ ವಿಶ್ವದಾದ್ಯಂತ ಟ್ವಿಟರ್ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 22 ಜಿಲ್ಲೆಗಳು ಪ್ರವಾಹ ಪ್ರಕೋಪದಲ್ಲಿ ತೀವ್ರ ಸಂಕಷ್ಟು ಅನುಭವಿಸಿವೆ. ಇಷ್ಟಾದರೂ ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡದೇ ಇರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.