ಮುಂಬೈ:ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಖನೌ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇತ್ತ ಕೋವಿಡ್ -19 ದೃಢಪಟ್ಟಿರುವ ಗಾಯಕಿ ತನ್ನ ಪ್ರಯಾಣದ ವಿಚಾರವನ್ನು ಮರೆ ಮಾಚಿದ್ದಕ್ಕಾಗಿ ಸಾಮಾಜಿಕ ಮಾಧ್ಯಮಗಳ ಟೀಕೆಗೆ ಗುರಿಯಾಗಿದ್ದಾರೆ.
ಕೊರೊನಾ ನಿರ್ಲಕ್ಷ್ಯ: ಟೀಕೆಗೆ ಗುರಿಯಾದ ಗಾಯಕಿ ಕನ್ನಿಕಾ ಕಪೂರ್ - ಸಾಮಾಜಿಕ ಮಾಧ್ಯಮಗಳ ಟೀಕೆಗೆ ಗುರಿಯಾದ ಗಾಯಕಿ ಕನ್ನಿಕಾ ಕಪೂರ್
ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಖನೌ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇತ್ತ ಕೋವಿಡ್ -19 ದೃಢಪಟ್ಟಿರುವ ಗಾಯಕಿ ತನ್ನ ಪ್ರಯಾಣದ ವಿಚಾರವನ್ನು ಮರೆ ಮಾಚಿದ್ದಕ್ಕಾಗಿ ಸಾಮಾಜಿಕ ಮಾಧ್ಯಮಗಳ ಟೀಕೆಗೂ ಗುರಿಯಾಗಿದ್ದಾರೆ.
#KanikaKaCoronaCrime ಎಂಬ ಹ್ಯಾಶ್‌ಟ್ಯಾಗ್ ನೊಂದಿಗೆ ಅಭಿಯಾನ ಆರಂಭಿಸಿದ ನೆಟ್ಟಿಗರು ಕನಿಕಾ ಅವರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್ನಲ್ಲಿ ವೈರಲ್ ಆಗಿರುವ ಒಂದು ಫೋಟೋ ಗಾಯಕಿ ಮತ್ತು ಶುಚಿಗೊಳಿಸುವ ಮಹಿಳಾ ಸಿಬ್ಬಂದಿಯ ಫೋಟೋವನ್ನು ಒಳಗೊಂಡಿದೆ.
ಕೂಲಿ ಕಾರ್ಮಿಕರು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಗೊಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವುದರಿಂದ ವೈರಸ್ ಹರಡುವುದಿಲ್ಲ. ಆದರೆ ಕೊರೊನಾ ಪಾಸಿಟಿವ್ ಬಾಲಿವುಡ್ ಗಾಯಕಿ ಕಾನಿಕಾ ಕಪೂರ್ ಕಳೆದ ಭಾನುವಾರ ಯುಕೆಯಿಂದ ಹಿಂದಿರುಗಿದ್ದು, ಅವರ ಪ್ರಯಾಣದ ವಿಚಾರವನ್ನು ಮರೆ ಮಾಡಿದ್ದಾರೆ. ಅಲ್ಲದೇ ಹಿಂದಿರುಗಿದ ನಂತರ ಹೋಟೆಲ್ ಪಾರ್ಟಿಗಳಲ್ಲಿ ಹಾಜರಾಗಿ ಅಲ್ಲಿಯೇ ಉಳಿದಿದ್ದರು. ಹಾಗಾಗಿ ನಿಮ್ಮ ನಾಯಕರನ್ನು ನೀವೇ ಬುದ್ಧಿವಂತಿಕೆಯಿಂದ ಆರಿಸಿ ಎಂದು ಟ್ವೀಟ್ ಮಾಡಲಾಗಿದೆ.