ಹೈದರಾಬಾದ್ ಪಶು ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ದೇಶದ ಜನತೆಯಲ್ಲಿ ಆಕ್ರೋಶ, ಸಂಕಟ, ಭೀತಿ ಹುಟ್ಟು ಹಾಕಿತ್ತು. ಅಂದಿನಿಂದ ಇಂದಿನವರೆಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಂತೂ ತಮ್ಮ ನೋವು, ಭೀತಿ, ಆಕ್ರೋಶ ಹೊರಹಾಕಿದ್ದರು. ಆದರೆ, ಇಂದು ಆ ಪ್ರಕರಣಕ್ಕೆ ಅಂತ್ಯ ದೊರೆತಿದೆ. ರಾಜಕೀಯ ನಾಯಕರು, ತಾರೆಗಳು ಹಲವರು ಈ ಉತ್ತರವನ್ನ ಮುಕ್ತವಾಗಿ ಸ್ವಾಗತಿಸಿದ್ದಾರೆ.
ಅಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ, ವಿಷಾದ ವ್ಯಕ್ತಪಡಿಸಿದವರು ಇಂದು ಪೊಲೀಸ್ ಅಧಿಕಾರಿಗಳ ಉತ್ತರವನ್ನು ಸಂತೋಷದಿಂದಲೇ ಸ್ವಾಗತಿಸಿ, ಗೌರವ ಸೂಚಿಸಿದ್ದಾರೆ. ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದಕ್ಕೆ ಸಾಕ್ಷಿ ಟ್ವಿಟರ್ನ ಟಾಪ್ 8 ಟ್ರೆಂಡಿಂಗ್ನಲ್ಲಿ ಎನ್ಕೌಂಟರ್ಗೆ ಸಂಬಂಧಿಸಿದ ಹ್ಯಾಶ್(#) ಟ್ಯಾಗ್ಗಳು ರಾರಾಜಿಸುತ್ತಿರುವುದು.
ಟಾಪ್ 8 ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ಗಳು:
ಟ್ವಿಟರ್ನ ಟಾಪ್ 8 ಟ್ರೆಂಡಿಂಗ್ನಲ್ಲಿ ರಾರಾಜಿಸುತ್ತಿರುವ ಎನ್ಕೌಂಟರ್ ಹ್ಯಾಶ್ ಟ್ಯಾಗ್ಗಳು ದೇಶದ ಟ್ವಿಟರ್ ಟ್ರೆಂಡಿಗ್ ಹ್ಯಾಶ್(#) ಟ್ಯಾಗ್ಗಳ ಪೈಕಿ ಮೊದಲನೆಯದ್ದು #ಎನ್ಕೌಂಟರ್,2) #ಹೈದರಾಬಾದ್‌ಪೊಲೀಸ್, 3)#ತೆಲಂಗಾಣ ಪೊಲೀಸ್, 4) #ಜಸ್ಟೀಸ್ಫಾರ್ದಿಶಾ, 5)#ಹ್ಯೂಮನ್ರೈಟ್ಸ್, 6) #ಜಸ್ಟೀಸ್ಫಾರ್ಪ್ರಿಯಾಂಕರೆಡ್ಡಿ, 7)#ಹೈದರಾಬಾದ್ಹಾರರ್, 8)#ಹೈದರಾಬಾದ್ಮರ್ಡರ್.
ಟಾಪ್ 8 ಟ್ರೆಂಡಿಂಗ್ ಹ್ಯಾಶ್ ಟಾಗ್ ಪೈಕಿ 7ರಲ್ಲಿ ಎನ್ಕೌಂಟರ್ನ ಸ್ವಾಗತಿಸಿ, ಬೆಂಬಲ ಸೂಚಿಸಿವೆ. ಆದರೆ, ಟಾಪ್ 5 ಸ್ಥಾನದಲ್ಲಿರುವ # ಹ್ಯೂಮನ್ರೈಟ್ಸ್(ಮಾನವ ಹಕ್ಕುಗಳು) ಮಾತ್ರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಕಾನೂನು ಬದ್ಧ ಕ್ರಮ ಜಾರಿಗೊಳ್ಳಬೇಕೇ ವಿನಃ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಜೊತೆಗೆ ಅವರು ಆರೋಪಿಗಳೇ ಆಗಿದ್ದರೂ ಅವರ ಸಾವನ್ನು ಸಂಭ್ರಮಿಸುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.