ಕರ್ನಾಟಕ

karnataka

ETV Bharat / bharat

ಹುಟ್ಟೂರಿಗೆ ಭೇಟಿ ನೀಡಿದ ಸರ್ಜಿಕಲ್​ ದಾಳಿ ಹಿಂದಿನ ಮಾಸ್ಟರ್ ಮೈಂಡ್​ ದೋವಲ್

ಸರ್ಜಿಕಲ್​ ದಾಳಿಯ ಹಿಂದಿನ ಮಾಸ್ಟರ್​ ಮೈಂಡ್​ ಅಜಿತ್​ ದೋವಲ್​ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದು, ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು.

NSA Ajit Doval
NSA Ajit Doval

By

Published : Oct 24, 2020, 5:52 PM IST

ಡೆಹ್ರಾಡೂನ್​(ಉತ್ತರಾಖಂಡ): ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​​​ಎಸ್​ಎ), ಸರ್ಜಿಕಲ್​ ದಾಳಿ ಹಿಂದಿನ ಮಾಸ್ಟರ್​ ಮೈಂಡ್​ ಅಜಿತ್​ ದೋವಲ್ ಬರೋಬ್ಬರಿ ವರ್ಷದ ಬಳಿಕ​ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದಾರೆ.

ಗ್ರಾಮಸ್ಥರೊಂದಿಗೆ ದೋವಲ್​ ಚರ್ಚೆ

ಉತ್ತರಾಖಂಡ್​ನ ಪೌರಿ ಜಿಲ್ಲೆಯ ಘೀಡಿ ಗ್ರಾಮಕ್ಕೆ ಭೇಟಿ ನೀಡಿರುವ ಅವರು, ಗ್ರಾಮಸ್ಥರೊಂದಿಗೆ ಕೆಲ ಹೊತ್ತು ಕಾಲ ಸಂವಾದ ನಡೆಸಿದ್ದು, ಇದಾದ ಬಳಿಕ ಆಶ್ರಮದಲ್ಲಿ ಉಳಿದುಕೊಂಡು ಯಜ್ಞದಲ್ಲಿ ಭಾಗಿಯಾದರು. ಸುಮಾರು ಒಂದು ವರ್ಷದ ಬಳಿಕ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದು​​, ಗ್ರಾಮ ದೇವತೆಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.

ಅಜಿತ್​ ದೋವಲ್​ ಗ್ರಾಮಕ್ಕೆ ಬಂದಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲು ಪ್ರಾರಂಭಿಸಿದರು. ಆದರೆ ಭದ್ರತಾ ಕಾರಣಗಳಿಂದಾಗಿ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಇದಕ್ಕೂ ಮೊದಲು ದೋವಲ್​ ಜ್ವಾಲ್ಫಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಹುಟ್ಟೂರಿಗೆ ಭೇಟಿ ನೀಡಿದ ಅಜಿತ್​ ದೋವಲ್​​

ಗುರುವಾರ ರಾತ್ರಿ ದೋವಲ್​ ಹೃಷಿಕೇಶದ ಆಶ್ರಮದಲ್ಲಿ ಉಳಿದು ಗಂಗೆಯಲ್ಲಿ ಸ್ನಾನ ಮಾಡಿ ಯಜ್ಞದಲ್ಲಿ ಭಾಗಿಯಾದರು. ಇಂದು ಸಂಜೆ ಅವರು ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದು, 2004-05ರಲ್ಲಿ ಇಂಟೆಲಿಜೆನ್ಸ್​​ ಬ್ಯೂರೋದ ನಿರ್ದೇಶಕರಾಗಿಯೂ ದೋವಾಲ್‌ ಸೇವೆ ಸಲ್ಲಿಸಿದ್ದಾರೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದೋವಾಲ್‌ ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಸದಸ್ಯರಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದಲ್ಲಿ​ ಗೂಢಾಚಾರರಾಗಿದ್ದು, ಪ್ರಧಾನಿ ಮೋದಿಯವರ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದಾರೆ.

ABOUT THE AUTHOR

...view details