ನವದೆಹಲಿ:ಮಹತ್ವದ ಬೆಳವಣಿಗೆಯಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಗೊಳಿಸಿದ ದಿನವೇ ಕಣಿವೆ ರಾಜ್ಯಕ್ಕೆ ತೆರಳಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದಾರೆ.
ಜೇಮ್ಸ್ಬಾಂಡ್ ಖ್ಯಾತಿಯ ದೋವಲ್ ಕಣಿವೆಯಲ್ಲಿ ಓಡಾಟ.... ಸ್ಥಳೀಯರೊಂದಿಗೆ ಊಟದ ಜತೆ ಚರ್ಚೆ!
ಮೂಲಗಳ ಪ್ರಕಾರ ಅಜಿತ್ ದೋವಲ್ ಇನ್ನೂ ಕೆಲ ದಿನಗಳ ಕಾಲ ಕಾಶ್ಮೀರದಲ್ಲೇ ಇರಲಿದ್ದು, ಸ್ವಾತಂತ್ರ್ಯೋತ್ಸವದ ಬಳಿಕವೇ ರಾಷ್ಟ್ರ ರಾಜಧಾನಿಗೆ ಮರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ವಾತಂತ್ರ್ಯ ದಿನಾಚರಣೆ ವೇಳೆ ಪಾಕ್ ಪೋಷಿತ ಉಗ್ರ ಸಂಘಟನೆಗಳಿಂದ ದಾಳಿ ನಡೆಯಲಿದೆ ಎನ್ನುವ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಅಜಿತ್ ದೋವಲ್ ಸ್ಥಳದಲ್ಲಿಯೇ ಇದ್ದು ಭದ್ರತೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಂಭಾವ್ಯ ದಾಳಿಯನ್ನು ಹಿಮ್ಮೆಟ್ಟಿಸಲು ದೋವಲ್ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಕಣಿವೆ ನಾಡಿನಲ್ಲೇ ಬೀಡು ಬಿಟ್ಟಿರುವ ಮೋದಿ ಬಲಗೈ ಬಂಟ ದೋವಲ್... ಅನಂತನಾಗ್ನಲ್ಲಿ ಓಡಾಟ!
ಸೋಮವಾರದಂದು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಅಲ್ಲಿನ ಸ್ಥಳೀಯರೊಂದಿಗೆ ಮಾತನಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆಗೆ ಭದ್ರತೆಯ ಬಗ್ಗೆ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.