ಅಯೋಧ್ಯೆ (ಉತ್ತರ ಪ್ರದೇಶ):'ತನು-ಮನ-ಧನ'ದಿಂದ ಜನರು ಈಗ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು. ಹೀಗೆ ಮಂದಿರ ನಿರ್ಮಾಣ ಕಾರ್ಯವನ್ನು ಮುನ್ನಡೆಸಬೇಕು ಎಂದು ಅಯೋಧ್ಯೆಯ ಪ್ರಮುಖ ಸಂತ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್ ಪ್ರಮುಖರಾದ ನೃತ್ಯ ಗೋಪಾಲ್ ದಾಸ್ ಕರೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣ ಅತಿ ಶೀಘ್ರದಲ್ಲೇ ಪೂರ್ಣಗೊಳ್ಳಬೇಕು: ನೃತ್ಯ ಗೋಪಾಲ್ ದಾಸ್ ಮನವಿ - ಉತ್ತರ ಪ್ರದೇಶ ಸುದ್ದಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಶ್ವದಲ್ಲಿ ನೆಲೆಸಿರುವ ಎಲ್ಲಾ ಹಿಂದೂಗಳ ಇಚ್ಛೆಯಾಗಿದ್ದು, ಆದಷ್ಟು ಬೇಗ ದೇವಾಲಯ ನಿರ್ಮಾಣಗೊಳ್ಳಬೇಕು ಎಂದು ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ.
ಶ್ರೀರಾಮ ಮಂದಿರಕ್ಕೆ ಅಯೋಧ್ಯೆಯಲ್ಲಿ ಶಿಲಾನ್ಯಾಸದ ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಯಾವಾಗ ಆಗುತ್ತದೆ ಎಂದು ಜನರು ನಮ್ಮನ್ನು ಕೇಳುತ್ತಿದ್ದರು. ಒಂದು ಕಡೆ ಮೋದಿ ಇದ್ದಾರೆ, ಇನ್ನೊಂದು ಕಡೆ ಯೋಗಿ ಇದ್ದಾರೆ. ಈಗಲೂ ರಾಮ ಮಂದಿರ ನಿರ್ಮಾಣ ಆಗದಿದ್ದರೆ ಮತ್ಯಾವಾಗ? ಅಂತ ನಾವು ಅವರಿಗೆ ಹೇಳುತ್ತಿದ್ದೆವು ಎಂದು ನೃತ್ಯ ಗೋಪಾಲ್ ದಾಸ್ ಸ್ಮರಿಸಿಕೊಂಡರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಶ್ವದಲ್ಲಿ ನೆಲೆಸಿರುವ ಎಲ್ಲಾ ಹಿಂದೂಗಳ ಇಚ್ಛೆ. ಮಂದಿರ ನಿರ್ಮಾಣ 'ನವ ಭಾರತ'ದ ನಿರ್ಮಾಣವಾಗಿದ್ದು, ಪುಣ್ಯ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಅತಿ ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.