ಕರ್ನಾಟಕ

karnataka

ETV Bharat / bharat

ಜನಗಣತಿಗೂ ತಟ್ಟಿದ ಕೊರೊನಾ ಭೀತಿ: ಮೊದಲ ಹಂತ ಮುಂದೂಡಿಕೆ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ಮೊದಲ ಹಂತದ ಜನಗಣತಿ 2021 ಅನ್ನು ಮುಂದೂಡಲಾಗಿದೆ.

NPR, first phase of Census postponed
ಜನಗಣತಿಗೂ ತಟ್ಟಿದ ಕೊರೊನಾ ಭೀತಿ

By

Published : Mar 25, 2020, 5:46 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 21 ದಿನಗಳ ಲಾಕ್‌ಡೌನ್‌ನಿಂದಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ಮೊದಲ ಹಂತದ ಜನಗಣತಿ 2021 ಅನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಕಾರ್ಯಗಳನ್ನು ಏಪ್ರಿಲ್ 1 ರಿಂದ ಸೆಪ್ಟಂಬರ್ 30 ರವರೆಗೆ ನಡೆಸಬೇಕಿತ್ತು. ಏಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ, ಫೆಬ್ರವರಿ 9 ರಿಂದ 28 ರ ವರೆಗೆ ಜನಸಂಖ್ಯೆ ಎಣಿಕೆ ಎಂಬ ಎರಡು ಹಂತಗಳಲ್ಲಿ ಜನಗಣತಿ 2021 ಅನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿತ್ತು. ಅಸ್ಸೋಂ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿ 2021 ರ ಮೊದಲ ಹಂತದ ಜೊತೆಗೆ ಎನ್‌ಪಿಆರ್ ನವೀಕರಣವನ್ನು ಮಾಡಲು ಪ್ರಸ್ತಾಪಿಸಲಾಗಿತ್ತು.
ಕೋವಿಡ್​ -19 ಭೀತಿಯಿಂದಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಘೋಷಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಕೊರೊನಾವನ್ನು ಗಮನದಲ್ಲಿಟ್ಟುಕೊಂಡು, ಏಪ್ರಿಲ್ 1 ರಿಂದ ವಿವಿಧ ದಿನಾಂಕಗಳಲ್ಲಿ ಪ್ರಾರಂಭವಾಗಬೇಕಿದ್ದ ಜನಗಣತಿ-2021 ಮತ್ತು ಎನ್‌ಪಿಆರ್ ನವೀಕರಣ ಮತ್ತು ವಿವಿಧ ಸಂಬಂಧಿತ ಕ್ಷೇತ್ರ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಈ ಕಾರಣ ಜನಗಣತಿ ಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details