ಕರ್ನಾಟಕ

karnataka

ETV Bharat / bharat

ಐತಿಹಾಸಿಕ ಆಗ್ರಾ ಹೆಸರು ಬದಲಾಯಿಸಲು ಯೋಗಿ ಸರ್ಕಾರ ಚಿಂತನೆ! - ಐತಿಹಾಸಿಕ ಜಿಲ್ಲೆಯ ಹೆಸರು ಬದಲಾವಣೆ

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ದೇಶದಲ್ಲಿ ನಾನಾ ಜಿಲ್ಲೆಯ ಹಾಗೂ ಪಟ್ಟಣಗಳ ಹೆಸರನ್ನು ಬದಲಿಸುತ್ತಾ ಬಂದಿದೆ. ಇದೀಗ ಮತ್ತೊಂದು ಐತಿಹಾಸಿಕ ಜಿಲ್ಲೆಯ ಹೆಸರನ್ನು ಬದಲಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಸರ್ಕಾರ ಕೈ ಹಾಕಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

By

Published : Nov 18, 2019, 6:01 PM IST

Updated : Nov 18, 2019, 6:29 PM IST

ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಐತಿಹಾಸಿಕ ಆಗ್ರಾ ಜಿಲ್ಲೆಯ ಹೆಸರನ್ನು ಬದಲಾಯಿಸಲು ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸರ್ಕಾರ ಈ ನಿಟ್ಟಿನಲ್ಲಿ ಅಲ್ಲಿನ ಡಾ. ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ತಜ್ಞರ ಸಲಹೆ ಕೋರಿದೆ ಎನ್ನಲಾಗುತ್ತಿದೆ. ವಿಶ್ವವಿದ್ಯಾಲಯಕ್ಕೆ ಆಗ್ರಾ ಹೆಸರಿನ ಐತಿಹಾಸಿಕ ಅಂಶವನ್ನು ಪರಿಶೀಲಿಸುವಂತೆಯೂ ಕೇಳಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿನ ಇತಿಹಾಸ ವಿಭಾಗವು ಇದೀಗ ಈ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ.

ತಾಜ್​ ಮಹಲ್​ (ಸಂಗ್ರಹ ಚಿತ್ರ)

ಮೂಲಗಳ ಪ್ರಕಾರ ಆಗ್ರಾವನ್ನು ಮೊದಲು ಅಗ್ರಾವಾನ್​ ಎಂದು ಕರೆಯಲಾಗುತ್ತಿತ್ತಂತೆ. ಅಗ್ರವಾನ್​ ಎಂಬ ಹೆಸರು ಇರುವುದಾಗಿ ತಿಳಿದು ಬಂದಿದ್ದರಿಂದ ಸರ್ಕಾರ ಇದನ್ನೇ ಇಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ, ಅಗ್ರವಾನ್ ಹೆಸರನ್ನು ಆಗ್ರಾ ಎಂದು ಬದಲಾಯಿಸಿದ್ದು ಯಾವಾಗ ಮತ್ತೆ ಏಕೆ ಎಂಬ ಅಂಶವನ್ನು ತಿಳಿದುಕೊಳ್ಳಲು ಸರ್ಕಾರ ಇತಿಹಾಸಕಾರರ ಮೊರೆ ಹೋಗಿದೆ.

ತಾಜ್​ ಮಹಲ್​ (ಸಂಗ್ರಹ ಚಿತ್ರ)

ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿತ್ತು. ಬಳಿಕ ಐತಿಹಾಸಿಕ ಮೊಘಲ್ ಸರಾಯ್ ರೈಲು ನಿಲ್ದಾಣವನ್ನು ದೀನ್​ ​ದಯಾಳ್ ​ಉಪಾಧ್ಯಾಯ ಎಂದು ಮರು ನಾಮಕರಣ ಮಾಡಲಾಯಿತ್ತು. ಇದೀಗ ಯೋಗಿ ಆದಿತ್ಯನಾಥ್​​ ಸರ್ಕಾರ ಆಗ್ರಾದತ್ತ ಮುಖ ಮಾಡಿದೆ.

Last Updated : Nov 18, 2019, 6:29 PM IST

ABOUT THE AUTHOR

...view details