ನವದೆಹಲಿ: ಪದೆ- ಪದೆ ಸಂಭವಿಸುತ್ತಿರುವ ಬೋಯಿಂಗ್ ಭೀಕರ ವಿಮಾನ ಅಪಘಾತ ಘಟನೆಗಳಿಂದ ಎಲ್ಲೆಡೆ 'ಬೋಯಿಂಗ್ 737 ಮ್ಯಾಕ್ಸ್ 8' ವಿಮಾನಗಳ ಬಗ್ಗೆ ಆತಂಕ ಹೆಚ್ಚಾಗಿದ್ದು, ಬ್ರಿಟನ್, ಜರ್ಮನಿ, ಫ್ರಾನ್ಸ್, ಇಥಿಯೋಪಿಯಾ, ಚೀನ, ಮಲೇಷ್ಯಾ ಬಳಿಕ ಭಾರತ ಸಹ ಈ ವಿಮಾನಗಳ ಹಾರಾಟಕ್ಕೆ ನಿಷೇಧಿಸಿದೆ.
ಬೋಯಿಂಗ್ 737 ವಿಮಾನಗಳ ಹಾರಾಟವನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ನಿರ್ಧಾರ ತೆಗೆದುಕೊಂಡಿದೆ. ಈ ವಿಮಾನಗಳಲ್ಲಿ ಸೂಕ್ತ ಬದಲಾವಣೆ ಹಾಗೂ ಸುರಕ್ಷಾ ಕಾರ್ಯಾಚರಣೆ ಖಾತರಿಪಡಿಸಿದ ಬಳಿಕವೇ ಹಾರಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ. ಎಂದು ನಾಗರಿಕ ವಿಮಾನಯಾನ ಇಲಾಖೆ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದೆ.