ಕರ್ನಾಟಕ

karnataka

ETV Bharat / bharat

ಬುಧವಾರ ಯಾರಿಗೆ ಅದೃಷ್ಟ... ನಿಮ್ಮ ಇಂದಿನ ರಾಶಿ ಭವಿಷ್ಯ ಹೀಗಿದೆ ನೋಡಿ - ನವೆಂಬರ್ 20 ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೀಗಿದೆ..

ರಾಶಿ ಭವಿಷ್ಯ

By

Published : Nov 20, 2019, 5:01 AM IST

ಮೇಷ

ಈ ದಿನ ಪರಿಪೂರ್ಣವಾಗಿ ಅದರಲ್ಲಿಯೂ ಸಾರ್ವಜನಿಕ ವಲಯ ಅಥವಾ ವೈದ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಚೆನ್ನಾಗಿರುತ್ತದೆ. ನೀವು ಸಾಕಷ್ಟು ಪ್ರಯತ್ನಗಳನ್ನು ಪಡುತ್ತೀರಿ ಮತ್ತು ದಿನದ ಅಂತ್ಯಕ್ಕೆ ನೀವು ಬಾಕಿ ಕೆಲಸಗಳನ್ನು ಪೂರೈಸುತ್ತೀರಿ. ಇಂದು ನೀವು ನಿಮ್ಮ ಮಕ್ಕಳು ಮಾಡಿದ ಬೇಡಿಕೆಗಳನ್ನು ಪೂರೈಸುತ್ತೀರಿ ಅಲ್ಲದೆ ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ.

ವೃಷಭ

ಇಂದು ನಿಮ್ಮ ಸೃಜನಶೀಲ ಭಾಗವು ನಿಮ್ಮ ಅತ್ಯಂತ ಸ್ಪರ್ಧಾತ್ಮಕ ಲಕ್ಷಣದೊಂದಿಗೆ ಸೇರಿದೆ. ಕೆಲಸದಲ್ಲಿ ನಿಮ್ಮ ದಕ್ಷತೆ ಮತ್ತು ಉತ್ಪಾದಕತೆ ಪ್ರತಿಯೊಬ್ಬರಿಂದಲೂ ಶ್ಲಾಘಿಸಲ್ಪಡುತ್ತದೆ ಮತ್ತು ಕೆಲವರು ನಿಮ್ಮನ್ನು ಅವರ ಸ್ಫೂರ್ತಿಯಾಗಿಯೂ ಪರಿಗಣಿಸಬಹುದು. ನಿಮ್ಮ ಸಹೋದ್ಯೋಗಿಗಳು ಹೊಂದಿಕೊಳ್ಳುವ ಮತ್ತು ಬೆಂಬಲಪೂರ್ವಕ ಸ್ವಭಾವ ಕಾಣುತ್ತೀರಿ. ನಿಮ್ಮ ಯೋಜನೆಗಳು ಅತ್ಯಂತ ವೇಗದಲ್ಲಿ ಪೂರ್ಣಗೊಳ್ಳುತ್ತವೆ ಮತ್ತು ನೀವು ಮಾಡುವ ಪ್ರತಿ ಕೆಲಸದಲ್ಲೂ ನೀವು ಅಸಾಧಾರಣ ಪುರಸ್ಕಾರಗಳನ್ನು ಪಡೆಯುತ್ತೀರಿ.

ಮಿಥುನ

ನೀವು ನಿಮ್ಮ ಹೃದಯಕ್ಕೆ ಬಹಳ ಹತ್ತಿರವಾದವರೊಂದಿಗೆ ಭಾವನಾತ್ಮಕ ಬಂಧ ರೂಪಿಸಿಕೊಳ್ಳುತ್ತೀರಿ. ಬಹಳಷ್ಟು ಸಮಯ ನೀವು ಅತ್ಯಂತ ಉತ್ಸಾಹದ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಹೆಚ್ಚಿನ ಶಕ್ತಿಯನ್ನು ಕೆಳಕ್ಕೆ ತರುವ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದರೆ ಹರ್ಷಚಿತ್ತದಿಂದ ನೀವು ಪರಿಹರಿಸಲಾಗದ ಸಮಸ್ಯೆಯೇ ಇಲ್ಲ.

ಕರ್ಕಾಟಕ

ನಿಮಗೆ ಒಂದು ಪುರಸ್ಕಾರಯುತ ದಿನ ಕಾದಿದೆ. ನಿಮ್ಮ ತಾರೆಗಳಲ್ಲಿ ಹೆಚ್ಚಿನ ನಷ್ಟಗಳೇನೂ ಬರೆದಿಲ್ಲ, ಆದರೆ ನೀವು ಕೊಂಚ ಗೊಂದಲದ ಭಾವನೆ ಹೊಂದಬಹುದು ಮತ್ತು ಕೆಲಕಾಲ ಏಕಾಂಗಿಯಾಗಿ ಕಾಲ ಕಳೆಯಲು ಬಯಸಬಹುದು. ನಿಮ್ಮ ಮಕ್ಕಳು ಹತ್ತಿರದಲ್ಲಿ ಇಲ್ಲದಿದ್ದರೆ ನೀವು ಭಾವನಾತ್ಮಕವಾಗಿ ಕಷ್ಟಕ್ಕೆ ಸಿಲುಕಬಹುದು.

ಸಿಂಹ

ನಿಮ್ಮ ಗಟ್ಟಿ ನಿರ್ಧಾರಗಳು ನಿಮಗೆ ಬಯಸಿದ ಫಲಿತಾಂಶಗಳನ್ನು ತಂದುಕೊಡಲು ನೆರವಾಗಬಹುದು. ನೀವು ಜಗಜಟ್ಡಿಯಂತೆ ಸದೃಢರಾಗಿರುತ್ತೀರಿ. ಕಛೇರಿಯಲ್ಲಿ ನೀವು ಕೊಂಚ ಗುರಿ ಆಧರಿತವಾಗಿರುತ್ತೀರಿ. ನಿಮ್ಮ ಬಾಂಧವ್ಯಗಳನ್ನು ಕಾಪಾಡಿಕೊಳ್ಳುವಲ್ಲಿ ಕೊಂಚ ಎಚ್ಚರವಾಗಿರಿ, ಏಕೆಂದರೆ ಅನಗತ್ಯ ವಾದ-ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ ಅದು ಮಿತಿಮೀರಿ ಹೋಗುವ ಸಾಧ್ಯತೆ ಇದೆ.

ಕನ್ಯಾ

ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳು ಇಂದು ಬೆಳಕು ಕಾಣುತ್ತವೆ. ನಿಮ್ಮ ವಿಶ್ಲೇಷಣಾತ್ಮಕ ಮತ್ತು ಸಂಧಾನ ಕೌಶಲ್ಯಗಳು ಯಾವುದೇ ವಿವಾದಗಳನ್ನು ಇತ್ಯರ್ಥಪಡಿಸಲು ಕೆಲಸ ಮಾಡುತ್ತವೆ. ನೀವು ತಾಳ್ಮೆಯ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳುತ್ತೀರಿ ಮತ್ತು ಅದರಿಂದ ಶಾಂತ ಮತ್ತು ಸಮಚಿತ್ತತೆಯಿಂದ ಯಶಸ್ಸಿನತ್ತ ಮುನ್ನಡೆಯುತ್ತೀರಿ.

ತುಲಾ

ಇಂದು ನಿಮಗೆ ನಿಮ್ಮ ಕುಟುಂಬದ ದಿನವಾಗಿದೆ. ಅವರೊಂದಿಗೆ ನೀವು ಆನಂದ ಹೊಂದುತ್ತೀರಿ ಹಾಗೂ ಚಿಕ್ಕ ಟ್ರಿಪ್ ಅಥವಾ ಪಿಕ್​​​​​​​​​​​​​​​​​ನಿಕ್ ಹೋಗುತ್ತೀರಿ. ಈ ದಿನ ಹಗುರ ಮತ್ತು ಆನಂದ ತುಂಬಿದೆ. ನೀವು ಮನಃ ಶಾಂತಿಗಾಗಿ ಆಧ್ಯಾತ್ಮಿಕ ಸ್ಥಳ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.

ವೃಶ್ಚಿಕ

ನಿಮ್ಮಲ್ಲಿ ಜೀವಿಸುತ್ತಿರುವ ಜ್ವಾಲಾಮುಖಿ ಇಂದು ಹೊರಕ್ಕೆ ಚಿಮ್ಮುತ್ತದೆ. ಈ ಅಭೂತಪೂರ್ವ ವಿದ್ಯಮಾನ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಬಹುದು. ಒತ್ತಡ ನಿವಾರಿಸಲು, ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಲು ಕಳೆಯಲು ಪ್ರಯತ್ನಿಸಿ.

ಧನಸ್ಸು

ನೀವು ಎರಡೂ ಕೈಗಳಲ್ಲಿ ಕೆಲಸ ಮಾಡಬಲ್ಲಿರಿ ಮತ್ತು ನಿಮ್ಮ ಸಂಘಟಿತ ವಿಭಾಗವು ಇಂದು ಸಕ್ರಿಯವಾಗಿರುತ್ತದೆ. ನಿಮಗೆ ನಿಜವಾಗಿಯೂ ಸದೃಢ ಗಟ್ಟಿತನದ ಭಾವನೆ ಇದೆ. ಅದು ನಿಮಗೆ ಮಾರ್ಗದರ್ಶನ ನೀಡಲಿ. ಸವಾಲುಗಳು ನಿಮ್ಮ ಬಾಗಿಲನ್ನು ತಟ್ಟಲಿವೆ.

ಮಕರ

ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವುದು ನಿಮಗೆ ಅನುಕೂಲಕರವಾಗಿ ಕೆಲಸ ಮಾಡಲಿದೆ. ಪೂರ್ವ ನಿರ್ಧಾರಿತ ಯೋಜನೆಗಳನ್ನು ಪೂರ್ಣಗೊಳಿಸುವುದು ದೂರದ ಆಲೋಚನೆಯಾಗಲಿದೆ. ಆದರೆ, ನೀವು ಅವುಗಳೆಲ್ಲವನ್ನೂ ಯಶಸ್ವಿಯಾಗಿ ಸಾಧಿಸುತ್ತೀರಿ. ನಿಮ್ಮ ಗಡುವು ವಿಸ್ತರಿಸಲು ಕಣ್ಣು ಕೆಂಪಗಾಗಿಸಬಹುದು. ಹಣಕಾಸಿನ ಸಮಸ್ಯೆಗಳು ಇಂದು ಕಾಳಜಿಯ ವಿಷಯವಲ್ಲ.

ಕುಂಭ

ಒಂದು ಕುಟುಂಬವು ಒಟ್ಟಿಗೆ ಆಹಾರ ಸೇವಿಸುತ್ತದೆ, ಪ್ರಾರ್ಥನೆ ಮಾಡುತ್ತದೆ ಮತ್ತು ಒಟ್ಟಿಗೆ ಜೀವಿಸುತ್ತದೆ. ಇದು ನಿಮ್ಮ ವಿಷಯದಲ್ಲಿ ನಿಜವಾಗುತ್ತದೆ. ನೀವು ನಿಮ್ಮ ಕುಟುಂಬದೊಂದಿಗೆ ಕೊಂಚ ಗುಣಮಟ್ಟದ ಸಮಯ ಕಳೆಯುತ್ತೀರಿ. ಮತ್ತು ಅವರೊಂದಿಗೆ ಜೀವಂತ ಕ್ಷಣಗಳನ್ನು ಕಳೆಯುತ್ತೀರಿ. ನೀವು ನೀಡುವ ಪ್ರೀತಿ ಹತ್ತು ಪಟ್ಟು ನಿಮಗೆ ಹಿಂದಿರುಗಿ ನೀಡಲಾಗುತ್ತದೆ. ನೀವು ಕೌಟುಂಬಿಕ ವ್ಯಕ್ತಿಯಾಗಿರುವುದಕ್ಕೆ ಶ್ಲಾಘನೆ ಮತ್ತು ಪುರಸ್ಕಾರ ಲಭಿಸುತ್ತದೆ.

ಮೀನ
ನಿಮ್ಮಲ್ಲಿ ಇಂದು ಕೊಂಚ ಬದಲಾವಣೆ ತರಲು ಪ್ರಯತ್ನಿಸಿ. ರೋಮ್ ಅನ್ನು ಒಂದು ದಿನದಲ್ಲಿ ನಿರ್ಮಾಣ ಮಾಡಲಿಲ್ಲ, ಹಾಗೆಯೇ ನಿಮಗೆ ಕೆಲಸ ಮಾಡಲು ಕೊಂಚ ಸಮಯ ತೆಗೆದುಕೊಳ್ಳಿ. ನಿಮ್ಮ ಬಯಕೆಯನ್ನು ಅನುಸರಿಸುವುದು ಮತ್ತು ಅದನ್ನು ನಿಮ್ಮ ವೃತ್ತಿಯಾಗಿಸುವುದು ದೀರ್ಘ ಸಮಯ ತೆಗೆದುಕೊಳ್ಳುತ್ತದೆ.

ABOUT THE AUTHOR

...view details