ಕರ್ನಾಟಕ

karnataka

ETV Bharat / bharat

ಎಚ್ಚರ..ಎಚ್ಚರ.. ಚರ್ಮದ ಮೇಲೆ ಕೊರೊನಾ ವೈರಸ್​ 9 ಗಂಟೆಗಳ ಕಾಲ ಬದುಕಬಲ್ಲದು..! - ಸ್ಯಾನಿಟೈಸರ್

ಜಪಾನ್‌ನ ವಿಶ್ವವಿದ್ಯಾಲಯವೊಂದು ನಡೆಸಿರುವ ಅಧ್ಯಯನವು ಕೋವಿಡ್​ -19 ಕಾಯಿಲೆಗೆ ಕಾರಣವಾಗುವ SARS-CoV-2 ವೈರಸ್ ಮಾನವರ ಚರ್ಮದ ಮೇಲೆ 9 ಗಂಟೆಗಳ ಕಾಲ ಜೀವಂತವಾಗಿರುತ್ತದೆ. ಹೀಗಾಗಿ ಸ್ಯಾನಿಟೈಸರ್ ಬಳಕೆ ಅತಿ ಮುಖ್ಯವಾಗಿದೆ ಎಂದು ತಿಳಿಸುತ್ತದೆ.

Novel coronavirus
ಕೊರೊನಾ ವೈರಸ್

By

Published : Oct 9, 2020, 5:25 PM IST

ನವದೆಹಲಿ:ಕೋವಿಡ್​-19 ಕಾಯಿಲೆಗೆ ಕಾರಣವಾಗುವ SARS-CoV-2 ವೈರಸ್ ಮಾನವರ ಚರ್ಮದ ಮೇಲೆ 9 ಗಂಟೆಗಳ ಕಾಲ ಜೀವಂತವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಸಾಮಾನ್ಯ ವೈರಲ್​ ಜ್ವರಕ್ಕೆ ಕಾರಣವಾಗುವ ಇನ್ಫ್ಲುಯೆಂಜಾ ವೈರಸ್ (IAV) ಮನುಷ್ಯರ ಚರ್ಮದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಇರುತ್ತವೆ. ಆದರೆ ಕೊರೊನಾ ವೈರಸ್ ಜನರ ಗಮನಕ್ಕೆ ಬಾರದೆ​ ಫ್ಲೂ ವೈರಸ್‌ಗಳಿಗಿಂತ ಹೆಚ್ಚು ಕಾಲ ಉಳಿಯುವ ವೈರಸ್​ ಆಗಿದೆ ಎಂದು ಜಪಾನ್‌ನ ಕ್ಯೋಟೋ ಪ್ರಿಫೆಕ್ಚರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ಹೇಳಿದ್ದಾರೆ.

SARS-CoV-2 ಮತ್ತು IAV ವೈರಸ್​ಗಳು ಗಾಜು, ಪ್ಲಾಸ್ಟಿಕ್‌ ಸೇರಿದಂತೆ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲೆಯೇ ಸಕ್ರಿಯವಾಗಿರುತ್ತದೆ. ಇದರಿಂದಾಗಿ ಬಹಳ ಸುಲಭ, ವೇಗವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಲು ಕಾರಣವಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಈ ಎರಡೂ ವೈರಸ್​ಗಳನ್ನು ಸ್ಯಾನಿಟೈಸರ್​ಗಳಿಂದ ನಾಶ ಮಾಡಬಹುದಾಗಿದೆ. ಹೀಗಾಗಿ ಕೋವಿಡ್​-19 ಹರಡುವಿಕೆ ತಡೆಗಟ್ಟುವಲ್ಲಿ ಕೈ ತೊಳೆಯುವ ಹಾಗೂ ಸ್ಯಾನಿಟೈಸರ್ ಬಳಕೆಯ ಪಾತ್ರ ಮಹತ್ವದ್ದಾಗಿದೆ ಎಂದು ಈ ಸಂಶೋಧನೆ ಒತ್ತಿ ಹೇಳುತ್ತಿದೆ.

ABOUT THE AUTHOR

...view details