ಜೈಪುರ (ರಾಜಸ್ಥಾನ): ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಆಡಳಿತದ ಆರನೇ ವಾರ್ಷಿಕೋತ್ಸವ ಆಚರಿಸುವುದು ಸರಿಯಲ್ಲ ಎಂದು ಹೇಳಿದ ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಇದು ಸಾಧನೆಗಳ ಬಗ್ಗೆ ಮಾತನಾಡುವ ಸಮಯವಲ್ಲ ಬದಲಾಗಿ ಜನರ ಕಣ್ಣೀರು ಒರೆಸುವ ಸಮಯವಾಗಿದೆ ಎಂದರು.
ಇದು ಸಂಭ್ರಮಾಚರಣೆಯ ಸಮಯವಲ್ಲ: ಮೋದಿ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ - ಮೋದಿ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ
ಜನರ ಸಮಸ್ಯೆಗಳನ್ನು ಪರಿಹರಿಸಬೇಕಾದ ಸಂದರ್ಭದಲ್ಲಿ, ಎನ್‌ಡಿಎ ಸರ್ಕಾರ ತನ್ನ ಆಡಳಿತದ ಆರನೇ ವಾರ್ಷಿಕೋತ್ಸವ ಆಚರಿಸುವುದು ಸರಿಯಲ್ಲ ಎಂದರು.
sachin pilot
ಜನರ ಸಮಸ್ಯೆಗಳನ್ನು ಪರಿಹರಿಸಬೇಕಾದ ಸಂದರ್ಭದಲ್ಲಿ, ಪಕ್ಷದ ಆರು ವರ್ಷಗಳ ಅಧಿಕಾರ ಪೂರ್ಣಗೊಂಡ ದಿನವನ್ನು ಆಚರಿಸಲು ಬಿಜೆಪಿ ಸರ್ಕಾರ ಮತ್ತು ನಾಯಕರು ಯೋಜಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರವು ಆರ್ಥಿಕ ಪ್ಯಾಕೇಜ್ ಘೋಷಿಸಿದರೂ, ಲಾಕ್‌ಡೌನ್‌ನಿಂದಾಗಿ ಆರ್ಥಿಕ ಪರಿಹಾರ ಬಡವರಿಗೆ ತಲುಪಲು ಸಾಧ್ಯವಾಗಲಿಲ್ಲ ಎಂದರು.