ಕರ್ನಾಟಕ

karnataka

ETV Bharat / bharat

ದೇಶವನ್ನ ಅನಾರೋಗ್ಯಕ್ಕೀಡು ಮಾಡಬೇಡಿ: ಎ.ಆರ್​ ರೆಹಮಾನ್​ - ಕೊರೊನಾ ವೈರಸ್​

ಕೊರೊನಾ ವೈರಸ್​ ಹೆಚ್ಚಾಗುತ್ತಿರುವ ಕಾರಣ, ಯಾವುದೇ ಕಾರಣಕ್ಕೂ ಸಭೆ ಸಮಾರಂಭಗಳಲ್ಲಿ ಭಾಗಿಯಾಗಬೇಡಿ ಎಂದು ಸಂಗೀತ ನಿರ್ದೇಶಕ ಎ.ಆರ್​ ರೆಹಮಾನ್​ ಮನವಿ ಮಾಡಿದ್ದಾರೆ.

A. R. Rahman
A. R. Rahman

By

Published : Apr 2, 2020, 8:48 PM IST

Updated : Apr 2, 2020, 8:55 PM IST

ಚೆನ್ನೈ: ಕೊರೊನಾ ವೈರಸ್​ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಆಸ್ಕರ್​ ಪ್ರಶಸ್ತಿ ವಿಜೇತ,ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ದೇಶದ ಜನರಲ್ಲಿ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ದೇಶಾದ್ಯಂತ ಕೋವಿಡ್​-19 ವೈರಸ್​ ಹೆಚ್ಚಿನ ಮಂದಿಗೆ ಹರಡುವಲ್ಲಿ ದೆಹಲಿಯ ನಿಜಾಮುದ್ದೀನ್​ ಧಾರ್ಮಿಕ ಕೇಂದ್ರದಲ್ಲಿ ಕಳೆದ ತಿಂಗಳು ನಡೆದಿದ್ದ ತಬ್ಲಿಘಿ ಜಮಾತ್ ಸಭೆ ಒಂದು ರೀತಿಯಲ್ಲಿ ಕಾರಣವಾಗಿದ್ದ ಬೆನ್ನಲ್ಲೇ ರೆಹಮಾನ್​ ಈ ರೀತಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಸೂಚನೆ ತಪ್ಪದೇ ಪಾಲಿಸುವಂತೆ ಮನವಿ ಮಾಡಿಕೊಂಡಿರುವ ಆಸ್ಕರ್​ ಪ್ರಶಸ್ತಿ ವಿಜೇತ ರೆಹಮಾನ್​, ಐಸೋಲೆಷನ್​, ಕ್ವಾರಂಟೈನ್​ ಪಾಲಿಸುವಂತೆ ಹೇಳಿದ್ದಾರೆ. ಇದೇ ವೇಳೆ, ಮಹಾಮಾರಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್​ ಹಾಗೂ ಎಲ್ಲ ಸಿಬ್ಬಂದಿಗಳ ನಿಸ್ವಾರ್ಥತತೆ ಹಾಗೂ ಧೈರ್ಯಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ದೇವರು ನಿಮ್ಮ ಹೃದಯದಲ್ಲಿದ್ದು, ಸಭೆ - ಸಮಾರಂಭಗಳಲ್ಲಿ ಭಾಗಿಯಾಗಿ ಸೋಂಕು ಹಬ್ಬಿಸುವ ಸಮಯ ಇದಲ್ಲ. ಸರ್ಕಾರ ಮಾತು ಕೇಳಿ ಎಂದಿರುವ ಅವರು, ವೈದ್ಯರು ತಮ್ಮ ಪ್ರಾಣ ಪಣಕ್ಕಿಟ್ಟು ನಮ್ಮ ಆರೋಗ್ಯ ಕಾಪಾಡುತ್ತಿದ್ದಾರೆ ಎಂದಿದ್ದಾರೆ.

Last Updated : Apr 2, 2020, 8:55 PM IST

ABOUT THE AUTHOR

...view details