ನವದೆಹಲಿ: ಯಾವುದೇ ಕಾರಣಕ್ಕೂ ನಾಗರಿಕ ಸೇವಾ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂಬ ಮಾಹಿತಿಯ ವರದಿಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.
ಕೇಂದ್ರ ನಾಗರಿಕ ಸೇವೆ ಪರೀಕ್ಷೆಗಳನ್ನು ನಡೆಸುವ ಸಂಬಂಧ ನಾಳೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರಿದ್ದ ಪೀಠ ಆಯೋಗಕ್ಕೆ ಸೂಚಿಸಿತ್ತು. ಬಳಿಕ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಆದರೆ ಆಯೋಗ ಇಂದೇ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ವಕೀಲ ನರೇಶ್ ಕೌಶಿಕ್ ವಿಚಾರಣೆ ವೇಳೆ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಮುಂದೂಡಿಕೆಯಿಂದ ಪರೀಕ್ಷೆ ಪ್ರಕ್ರಿಯೆಗೆ ಸಮಸ್ಯೆಯಾಗಲಿದೆ ಎಂಬುದುನ್ನು ಅರಿತುಕೊಳ್ಳಲಾಗಿದೆ.
ಸೆಪ್ಟೆಂಬರ್ 30ರಂದು ಪರೀಕ್ಷೆ ನಡೆಯಬೇಕಾಗಿತ್ತು. ಆ ಬಳಿಕ ಅಕ್ಟೋಬರ್ 4ಕ್ಕೆ ಮುಂದೂಡಲಾಗಿತ್ತು. ಆದರೆ ಮುಂದೂಡಿಕೆಯಿಂದ ಸರ್ಕಾರದ ನಾಲ್ಕು ಆಧಾರಸ್ತಂಭಗಳನ್ನೇ ಇಲ್ಲವಾಗಿಸುವಂತಾಗುತ್ತದೆ ಎಂದು ವಕೀಲ ಕೌಶಿಕ್ ಕೋರ್ಟ್‌ಗೆ ತಿಳಿಸಿದ್ದಾರೆ. ಬಳಿಕ ಕೋರ್ಟ್ ಈ ಸಂಬಂಧ ಸಣ್ಣದೊಂದು ಅಫಿಡವಿಟ್ ಸಲ್ಲಿಸುವಂತೆ ವಕೀಲ ಕೌಶಿಕ್ ಅವರಿಗೆ ಸೂಚಿಸಿತ್ತು.
ದೇಶದ ಹಲವೆಡೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಹಾಗೂ ಭಾರೀ ಮಳೆಯಿಂದ ಎರಡರಿಂದ ಮೂರು ತಿಂಗಳು ನಾಗರಿಕ ಸೇವಾ ಪರೀಕ್ಷೆಯನ್ನು ಮುಂದೂಡಲಾಗಿತ್ತು.