ಕರ್ನಾಟಕ

karnataka

ETV Bharat / bharat

ಉತ್ತರ ರೈಲ್ವೆಯ ಅಂಬಾಲಾ ವಿಭಾಗದ ಸಾಧನೆ.. ಒಂದೇ ದಿನದಲ್ಲಿ ದಾಖಲೆಯ ಸರಕು ಸಾಗಣೆ.. - ಉತ್ತರ ರೈಲ್ವೆಯ ಅಂಬಾಲಾ ವಿಭಾಗ

ಏಪ್ರಿಲ್ 9ರಂದು ಅಂಬಾಲಾ ವಿಭಾಗದಲ್ಲಿ 23 ರೇಕ್​ಗಳಲ್ಲಿ 20ರಲ್ಲಿ ಆಹಾರ ಧಾನ್ಯಗಳು, ಒಂದು ಕಂಟೇನರ್ ರೇಕ್​ ಆಗಿದ್ದು, ಉಳಿದ ಇನ್ನೆರಡು ರೇಕ್​ಗಳಲ್ಲಿ ರಸಗೊಬ್ಬರಗಳನ್ನು ಲೋಡ್​ ಮಾಡಲಾಗಿತ್ತು. ಈ ಹಿಂದೆ ಅಂದರೆ ಕಳೆದ ವರ್ಷ ಜನವರಿ 21 ರಂದು 10.1 ಕೋಟಿ ಸರಕು ಗಳಿಕೆ ಮಾಡಿದ ದಾಖಲೆ ನಿರ್ಮಾಣವಾಗಿತ್ತು.

ಉತ್ತರ ರೈಲ್ವೆಯ ಅಂಬಾಲಾ ವಿಭಾಗದ ಸಾಧನೆ
ಉತ್ತರ ರೈಲ್ವೆಯ ಅಂಬಾಲಾ ವಿಭಾಗದ ಸಾಧನೆ

By

Published : Apr 12, 2020, 4:43 PM IST

ಅಂಬಾಲಾ (ಹರಿಯಾಣ): ಉತ್ತರ ರೈಲ್ವೆಯ ಅಂಬಾಲಾ ವಿಭಾಗವು ಒಂದೇ ದಿನದಲ್ಲಿ ಅತಿ ಹೆಚ್ಚು ಸರಕು ಗಳಿಕೆಯನ್ನು ದಾಖಲಿಸಿದೆ.

ಕೊರೊನಾ ಹಿನ್ನೆಲೆ ಲಾಕ್​ಡೌನ್​ ವಿಧಿಸಲಾಗಿದೆ. ಆದರೆ, ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಿಸಿದಂತೆ ರೈಲು, ವಿಮಾನ ಹಾಗೂ ಇತರೆ ವಾಹನಗಳಿಗೆ ಅನುಮತಿ ನೀಡಲಾಗಿದೆ. ಇನ್ನು ಈ ಅಂಬಾಲಾ ವಿಭಾಗದಲ್ಲಿ 10. 4 ಕೋಟಿಯ ಸರಕು ಗಳಿಕೆಯನ್ನು ಮಾಡಿ ದಾಖಲೆ ನಿರ್ಮಾಣ ಮಾಡಿದೆ. ಏಪ್ರಿಲ್ 9ರಂದು ಅಂಬಾಲಾ ವಿಭಾಗದಲ್ಲಿ 23 ರೇಕ್​ಗಳಲ್ಲಿ 20ರಲ್ಲಿ ಆಹಾರ ಧಾನ್ಯಗಳು, ಒಂದು ಕಂಟೇನರ್ ರೇಕ್​ ಆಗಿದ್ದು, ಉಳಿದ ಇನ್ನೆರಡು ರೇಕ್​ಗಳಲ್ಲಿ ರಸಗೊಬ್ಬರಗಳನ್ನು ಲೋಡ್​ ಮಾಡಲಾಗಿತ್ತು. ಈ ಹಿಂದೆ ಅಂದರೆ ಕಳೆದ ವರ್ಷ ಜನವರಿ 21 ರಂದು 10.1 ಕೋಟಿ ಸರಕು ಗಳಿಕೆ ಮಾಡಿದ ದಾಖಲೆ ನಿರ್ಮಾಣವಾಗಿತ್ತು.

ಉತ್ತರ ರೈಲ್ವೆಯ ಅಂಬಾಲಾ ವಿಭಾಗವು ಸರಕು ಸಾಗಣೆ ಸೇವೆಗಳನ್ನು ದೇಶದ ಉತ್ತರ ಭಾಗದಿಂದ ಭಾರತದ ಉಳಿದ ಭಾಗಗಳಿಗೆ ನಿರಂತರವಾಗಿ ಪೂರೈಸುತ್ತದೆ. ಈ ಸರಕುಗಳನ್ನು ಲೋಡ್ ಮಾಡುವಾಗ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾರ್ಮಿಕ ಮತ್ತು ಇತರೆ ಸಿಬ್ಬಂದಿಗೆ ಮುಖಗವಸು, ಸ್ಯಾನಿಟೈಸರ್​​ಗಳು ಮತ್ತು ಕೈಗವಸುಗಳನ್ನು ನೀಡಲಾಗುತ್ತದೆ. ಅಲ್ಲದೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲಾಗುತ್ತದೆ ಎಂದು ಅಂಬಾಲಾದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹರಿ ಮೋಹನ್ ತಿಳಿಸಿದ್ದಾರೆ.

ABOUT THE AUTHOR

...view details