ನವದೆಹಲಿ :ಸಿಎಎ ಪ್ರತಿಭಟನೆ ವೇಳೆಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಿರು ಚಿತ್ರ ನಿರ್ಮಾಪಕ ರಾಹುಲ್ ರಾಯ್ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಸಬಾ ದಿವಾನ್ಗೆ ದೆಹಲಿ ಪೊಲೀಸರ ವಿಶೇಷ ವಿಭಾಗ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಈಶಾನ್ಯ ದೆಹಲಿ ಗಲಭೆ ಪ್ರಕರಣ : ರಾಹುಲ್ ರಾಯ್, ಸಬಾ ದಿವಾನ್ಗೆ ಪೊಲೀಸ್ ಸಮನ್ಸ್ - ಚಿತ್ರ ನಿರ್ಮಾಪಕರಿಗೆ ಪೊಲೀಸ್ ಸಮನ್ಸ್
ಸಿಎಎ ಪ್ರತಿಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇಬ್ಬರು ಚಿತ್ರ ನಿರ್ಮಾಪಕರಿಗೆ ವಿಚಾರಣೆಗೆ ಹಾಜಾರಾಗುವಂತೆ ಪೊಲೀಸರು ಸಮನ್ಸ್ ನೀಡಿದ್ದಾರೆ.
![ಈಶಾನ್ಯ ದೆಹಲಿ ಗಲಭೆ ಪ್ರಕರಣ : ರಾಹುಲ್ ರಾಯ್, ಸಬಾ ದಿವಾನ್ಗೆ ಪೊಲೀಸ್ ಸಮನ್ಸ್ Delhi Police summons Rahul Roy, Saba Dewan](https://etvbharatimages.akamaized.net/etvbharat/prod-images/768-512-8797209-thumbnail-3x2-hrss.jpg)
ದೆಹಲಿ ಗಲಭೆ ಪ್ರಕರಣ
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ಬಳಿಕ ರಾಹುಲ್ ರಾಯ್ ಮತ್ತು ಸಬಾ ದಿವಾನ್ಗೆ ಸಮನ್ಸ್ ನೀಡಲಾಗಿದೆ. ಸತತ 11 ಗಂಟೆಗಳ ವಿಚಾರಣೆಯ ಬಳಿಕ ಉಮರ್ ಖಾಲಿದ್ನನ್ನು ಪೊಲೀಸರು ಬಂಧಿಸಿದ್ದರು.
2020 ಫೆಬ್ರವರಿ 24 ರಂದು ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ-ವಿರೋಧ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ 53 ಜನರ ಮೃತಪಟ್ಟಿದ್ದರು, ಸುಮಾರು 200 ರಷ್ಟು ಜನರು ಗಾಯಗೊಂಡಿದ್ದರು. .