ಕರ್ನಾಟಕ

karnataka

ETV Bharat / bharat

ಖುಷಿ ವಿಚಾರ; ಚೆನ್ನಾಗಿ ಸುರಿಯಲಿದೆ ಮುಂಗಾರು ಮಳೆ ! - ಎಲ್​ ನಿನಾ

2020 ರ ಮಾನ್ಸೂನ್​ ಅವಧಿಯಲ್ಲಿ ಶೇ.100 ರಷ್ಟು ಮಳೆಯಾಗುವ ಅಂದಾಜು ಮಾಡಲಾಗಿದೆ. ಜೂನ್​ನಿಂದ ಸೆಪ್ಟೆಂಬರ್ ಅವಧಿಯ ನೈರುತ್ಯ ಮುಂಗಾರು ದೇಶಾದ್ಯಂತ ಸರಾಸರಿಯಾಗಿ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Normal Monsoon this year
Normal Monsoon this year

By

Published : Apr 15, 2020, 6:40 PM IST

ಹೊಸದಿಲ್ಲಿ: ಪ್ರಸಕ್ತ ವರ್ಷದ ಮುಂಗಾರು ಮಳೆ ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕಳದೊಂದು ತಿಂಗಳಿಂದ ಲಾಕ್​ಡೌನ್​ನಲ್ಲಿರುವ ದೇಶಕ್ಕೆ ಈ ಸುದ್ದಿ ಮುಂಗಾರು ಮಳೆ ಸುರಿದಷ್ಟೇ ಖುಷಿ ತಂದಿದೆ.

ಜೂನ್​ನಿಂದ ಸೆಪ್ಟೆಂಬರ್ ಅವಧಿಯ ನೈರುತ್ಯ ಮುಂಗಾರು ದೇಶಾದ್ಯಂತ ಸರಾಸರಿಯಾಗಿ ಸಾಮಾನ್ಯವಾಗಿರಲಿದೆ ಎಂದು ತನ್ನ ಮೊದಲ ಲಾಂಗ್​ ರೇಂಜ್​ ಮುನ್ಸೂಚನೆಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ.

1961 ರಿಂದ 2010 ರ ಅವಧಿಯಲ್ಲಿ ದೇಶದಲ್ಲಿ ವಾರ್ಷಿಕ ಸರಾಸರಿ 88 ಸೆಂಮೀ ಮಳೆಯಾಗುತ್ತಿದೆ. ಈ ಲೆಕ್ಕದಲ್ಲಿ ಶೇ.96 ರಿಂದ 100 ರಷ್ಟು ಪ್ರಮಾಣದ ಮಳೆಯಾಗುವಿಕೆಯನ್ನು ಸಾಮಾನ್ಯ ಮುಂಗಾರು ಎನ್ನಲಾಗುತ್ತದೆ. ಅದರಂತೆ 2020 ರ ಮಾನ್ಸೂನ್​ ಅವಧಿಯಲ್ಲಿ ಶೇ.100 ರಷ್ಟು ಮಳೆಯಾಗುವ ಅಂದಾಜು ಮಾಡಲಾಗಿದೆ. ಇದರಲ್ಲಿ ಶೇ.5ರಷ್ಟು ಹೆಚ್ಚು ಕಡಿಮೆಯಾಗಬಹುದು ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ರಾಜೀವನ್​ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

"ಮಳೆ ಕೊರತೆಯಾಗುವ ಸಾಧ್ಯತೆಗಳು ಕೇವಲ ಶೇ.9 ರಷ್ಟು ಮಾತ್ರ ಇರುವುದು ಸಂತಸದ ವಿಚಾರವಾಗಿದ್ದು, ಈ ಬಾರಿ ಸಾಮಾನ್ಯ ಮುಂಗಾರು ನಿರೀಕ್ಷಿಸಬಹುದು" ಎಂದು ಅವರು ಮಾಹಿತಿ ನೀಡಿದರು.

ಜಾಗತಿಕ ಹವಾಮಾನ ಮಾದರಿಗಳ ಅಧ್ಯಯನದ ಪ್ರಕಾರ ಮುಂಗಾರಿನ ಎರಡನೇ ದ್ವಿತೀಯಾರ್ಧದಲ್ಲಿ ಪೆಸಿಫಿಕ್ ಸಾಗರದ ಮೇಲೆ ಎಲ್​ ನಿನಾ ಪರಿಣಾಮ ದುರ್ಬಲವಾಗಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಹೇಳಿದರು.

ABOUT THE AUTHOR

...view details